ಮೈಸೂರು,ಮೇ,15,2019(www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರ ಸಂಬಂಧ ಈ ವಿಚಾರದಲ್ಲಿ ಸಂಘ ಮೂಗು ತೂರಿಸಿಲ್ಲ, ಮುಂದೆಯು ಇಲ್ಲ ಎಂದು ಆರ್.ಎಸ್.ಎಸ್ ಸರ ಸಂಚಾಲಕ ಪ್ರಭಾಕರ್ ಭಟ್ ಕಲ್ಲಡ್ಕ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಕಲ್ಲಡ್ಗ ಪ್ರಭಾಕರ್ ಭಟ್, ರಾಜ್ಯಧ್ಯಕ್ಷ ಬದಲಾವಣೆ ಬಿಜೆಪಿ ಪಕ್ಷ ನೋಡಿಕೊಳ್ಳುತ್ತೆ. ಸಂಘಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಸಂಘದಿಂದ ಯಾರು ಕೂಡು ಆಕಾಂಕ್ಷಿಗಳಿಲ್ಲ ಎಂದು ಹೇಳಿದರು.
ಇದೇ ವೇಳೆ ಸಮ್ಮಿಶ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಪ್ರಭಾಕರ್ ಭಟ್, 37ಸ್ಥಾನ ಇರುವ ಪಕ್ಷದವರು ಮುಖ್ಯಮಂತ್ರಿಯಾಗಿದ್ದಾರೆಂಬುದು ಸಂವಿಧಾನದ ವಿಡಂಬನೆ. ಕರ್ನಾಟಕ ರಾಜ್ಯದ 70ವರ್ಷಗಳ ಇತಿಹಾಸದಲ್ಲಿ ಸರ್ಕಾರವೇ ಇಲ್ಲ ಎನ್ನುವ ಸ್ಥಿತಿ ಈಗ ನಿರ್ಮಾವಾಗಿದೆ. ರಾಜಕೀಯ ಸ್ಥಿತ್ಯಂತರಗಳಿಂದಾಗಿ ಈ ಪರಿಸ್ಥಿತಿ ಇದೆ. ಸರ್ಕಾರ ರಚನೆಯಾಗಿ ಒಂದು ವರ್ಷ ಆಗುತ್ತಿದೆ. ಎಲ್ಲಿಯೂ ಸರ್ಕಾರ ಇದೆ ಅಂತ ಅನ್ನಿಸುತ್ತಿಲ್ಲ. 37ಸ್ಥಾನ ಗೆದ್ದಿರುವ ಪಕ್ಷದವರು ಮುಖ್ಯಮಂತ್ರಿಯಾಗಿದ್ದಾರೆಂದರೆ ಏನ್ ಹೇಳೊಣ..? ಎಂದು ಪ್ರಶ್ನಿಸಿದರು.
ರಾಜಕೀಯ ಕಿತ್ತಾಟಗಳಿಂದಾಗಿ ಸರ್ಕಾರವೇ ಇಲ್ಲವಾಗಿದೆ. ಈ ಸರ್ಕಾರ ಯಾವಾಗ ಬೇಕಾದರೂ ಬಿದ್ದುಹೋಗಬಹುದು. ಅದು ಮೇ.23ರ ನಂತರವೂ ಆಗಬಹುದು. ಈ ಸರ್ಕಾರ ಹೆಚ್ಚುದಿನ ಉಳಿಯೋದಿಲ್ಲ ಎಂದು ಪ್ರಭಾಕರ್ ಭಟ್ಟ ಕಲ್ಲಡ್ಕ ಭವಿಷ್ಯ ನುಡಿದರು.
ಪ್ರಧಾನಿ ಮೋದಿಯಿಂದ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಮೂಲೆಗುಂಪು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಭಾಕರ್ ಭಟ್ ಕಲ್ಲಡ್ಕ, ಇದು ಕೇವಲ ಮಾಧ್ಯಮಗಳ ಸೃಷ್ಟಿ. ಅಡ್ವಾಣಿ ಅಶಿರ್ವಾದದಿಂದಲೇ ಮೋದಿ ಚುನಾವಣೆ ಎದುರಿಸುತ್ತಿದ್ದಾರೆ. ಅಡ್ವಾನಿ ಎಲ್ಲೂ ಈ ರೀತಿ ಹೇಳಿಲ್ಲ. ಕೇಂದ್ರ ಬಿಜೆಪಿಯಲ್ಲಿ ಎಲ್ಲವು ಸರಿ ಇದೆ. ಈ ವಿಚಾರದಲ್ಲಿ ಮಾಧ್ಯಮಗಳು ಅನವಶ್ಯಕ ಗೊಂದಲ ಸೃಷ್ಟಿ ಮಾಡಬಾರದು ಎಂದು ಮಾಧ್ಯಮಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಭಾಷಣದ ವೇಳೆ ಗಲಾಟೆ ವಿಚಾರ ಸಂಬಂಧ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡುವ ಅವಕಾಶ ಇದೆ. ಅವರು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದರೆ ಸರ್ಕಾರ ಏನು ಕೆಲಸಮಾಡಿಲ್ಲ ಎಂದೆ ಅರ್ಥ. ಅದನ್ನ ಮುಚ್ಚಿಕೊಳ್ಳಲು ಇತರರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಇದು ಹಿಂದೆ ಇದ್ದ ಕಮ್ಯೂನಿಸ್ಟ್ ಸರ್ಕಾರ ಸರಿ ಇಲ್ಲ ಅಂತ ದೀದಿಗೆ ಅಧಿಕಾರಕೊಟ್ಟಿದ್ದಾರೆ. ದೀದಿಯು ಅದೆ ಹಾದಿ ತುಳಿದಿರುವುದು ಸರಿಯಲ್ಲ. ಸರ್ಕಾರವನ್ನ ವಜಾ ಮಾಡಲು ಸಂವಿಧಾನದಲ್ಲಿ ಅವಕಾಶ ಇದಿಯೋ ಇಲ್ಲವೋ ನನಗೆ ಗೊತ್ತಿಲ್ಲ. ಅವಕಾಶ ಇದ್ದರೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ನಾಥೂರಾಮ್ ಗೋಡ್ಸೆ ದೇಶದ ಮೊದಲ ಹಿಂದೂ ಭಯೋತ್ಪಾದಕ ಎನ್ನುವ ನಟ ಕಮಲ ಹಾಸನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಭಾರಕ್ ಭಟ್, ಯಾರರ್ಯಾರೋ ಏನೇನೋ ಹುಚ್ಚರ ರೀತಿಯಲ್ಲಿ ಮಾತನಾಡುತ್ತಾರೆ ಅಂತವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ ಎಂದರು.
Key woeds: BJP –prsident-change- -Sangh – RSS – Prabhakar Bhat Kalladka