ಬೆಂಗಳೂರು, ಆಗಸ್ಟ್ 1, 2021 (www.justkannada.in): ಜಾತಿ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ಹಂಚಲು ಬಿಜೆಪಿಯಲ್ಲಿ ತಯಾರಿ ನಡೆದಿದೆ.
ಲಿಂಗಾಯತರಿಗೆ-8, ಒಕ್ಕಲಿಗರಿಗೆ-7, ದಲಿತರಿಗೆ-7, ಹಿಂದುಳಿದ ವರ್ಗದ ಶಾಸಕರಿಗೆ -7 ಸ್ಥಾನ ಹಾಗೂ ಜೈನ, ದೇವಾಂಗ ಸೇರಿ ಉಳಿದವರಿಗೆ 4 ಸ್ಥಾನ ನೀಡುವ ಲೆಕ್ಕಾಚಾರದ ಹರಿದಾಡುತ್ತಿದೆ.
ಈ ಪಂಚ ಸೂತ್ರದಡಿ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕಳಂಕಿತರಿಗೆ ಅದರಲ್ಲೂ ನ್ಯಾಯಾಲಯದ ಮೊರೆ ಹೋಗಿ ತಮ್ಮ ವಿರುದ್ಧ ಮಾನಹಾನಿಯಂತ ಪ್ರಕರಣ ಪ್ರಸಾರವಾಗದಂತೆ ತಡೆಯಾಜ್ಞೆ ತಂದ ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಆರ್ಎಸ್ಎಸ್ ಸಂದೇಶ ನೀಡಿದೆ ಎನ್ನಲಾಗುತ್ತಿದೆ.
ಮುಂದಿನ ಕರ್ನಾಟಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸಚಿವ ಸಂಪುಟ ರಚನೆಗೆ ಬಿಜೆಪಿ ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂಬ ಮಾಹಿತಿಯಿದೆ.