ಬೆಂಗಳೂರು,ಫೆಬ್ರವರಿ,22,2022(www.justkannada.in): ಶಿವಮೊಗ್ಗದಲ್ಲಿ ನಿನ್ನೆ ಭಜರಂಗದಳದ ಕಾರ್ಯಕರ್ತ ಹರ್ಷ ಅಂತಿಮಯಾತ್ರೆ ವೇಳೆ ಉಂಟಾದ ಉದ್ವಿಗ್ನ ಪರಿಸ್ಥಿತಿಗೆ ಬಿಜೆಪಿ, ಆರ್ ಎಸ್ ಎಸ್ ಕಾರಣ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು.
ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಭಜರಂಗದಳದ ಕಾರ್ಯಕರ್ತ ಹರ್ಷ ಮೃತದೇಹ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಕದಡಲು ಬಿಜೆಪಿ, ಆರ್ ಎಸ್ ಎಸ್ ಕಾರಣ. ನಿಷೇಧಾಜ್ಞೆಯ ನಡುವೆಯೂ ಮೆರವಣಿಗೆ ಮಾಡೋದಕ್ಕೆ ಪೊಲೀಸರು ಅನುಮತಿ ಕೊಟ್ಟಿದ್ದೇಕೆ.? ಎಂದು ಪ್ರಶ್ನಿಸಿದರು.
ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಿದ್ದೂ ಹರ್ಷ ಪಾರ್ಥೀವ ಶರೀರದ ಮೆರವಣಿಗೆ ಮಾಡಿದ್ದಾರೆ. ಹಿಂದೂ ಸಂಘಟನೆಗಳೇ ಬೀದಿಗಿಳಿದು ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆ ಸಚಿವ ಈಶ್ವರಪ್ಪನವರೇ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅವರದ್ಧೇ ಸರ್ಕಾರ ಜಾರಿ ಮಾಡಿದ್ಧ 144 ಸೆಕ್ಷನ್ ಅನ್ನ ಅವರೇ ಉಲ್ಲಂಘಿಸಿದ್ದಾರೆ ಎಂದು ಕಿಡಿಕಾರಿದರು
ಸಾಕ್ಷ್ಯಾಧಾರಗಳಿದ್ಧರೇ ಪಿಎಫ್ಐ, ಎಸ್ ಡಿ ಪಿಐ ನಿಷೇಧ ಮಾಡಲಿ. ಈ ಬಗ್ಗೆ ನಮ್ಮ ತಕರಾರು ಇಲ್ಲ. ಬಿಜೆಪಿ ಸರ್ಕಾರವೇ ಇದೆ. ಈಗ ನಿಷೇಧ ಮಾಡಲಿ ಎಂದರು.
Key words: BJP-RSS-Shimoga-Siddaramaiah