ಜಿಲ್ಲೆಯಲ್ಲಿ 80 ಕೋಟಿ ರೂ. ವೆಚ್ಚದ ಕಾಮಗಾರಿ ರದ್ದು : ಬಿಜೆಪಿ ದ್ವೇಷದ ರಾಜಕಾರಣ ವಿರುದ್ಧ ‘ಖಾರ’ ಮಹೇಶ್..

 

ಮೈಸೂರು, ಸೆ.08, 2019 : ( www.justkannada.in news ) ನನ್ನ ಅವಧಿಯಲ್ಲೇ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿಗೆಂದು ೨ ಕೋಟಿ ರೂ.ಗೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಆ ಹಣವನ್ನ ಬಳಿಸಕೊಂಡು ಅಭಿವೃದ್ಧಿ ಕೆಲಸ ಮಾಡಿ. ಅದನ್ನ ಬಿಟ್ಟು ಅಧಿಕಾರಿಗಳಿಗೆ ತಾಕೀತು ಮಾಡೋದ್ಯಾಕೆ, ಬದಲಿಗೆ ಕೆರೆ ಅಭಿವೃದ್ಧಿ ಕುರಿತು ಅಲ್ಲಿನ ಪರಿಸರವಾದಿಗಳಿಂದ ಸಲಹೆ ಪಡೆಯಿರಿ ಎಂದು ಸಚಿವ ವಿ.ಸೋಮಣ್ಣ ಅವರಿಗೆ ಮಾಜಿ ಸಚಿವ ಸಾ.ರ.ಮಹೇಶ್ ಸಲಹೆ ನೀಡಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಭಾನುವಾರ ಶಾಸಕ ಅಶ್ವಿನ್ ಕುಮಾರ್ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ ಸಾ.ರ.ಮಹೇಶ್ ಹೇಳಿದಿಷ್ಟು….
ಮೈಸೂರಿನಲ್ಲಿ‌ ದಸರಾ ಮಹೋತ್ಸವ ನಡೆಯುತ್ತಿದೆ. ನಮ್ಮ ಕೆಲ ಬಿಜೆಪಿ ಮಿತ್ರರು ಹೇಳ್ತಾರೆ ನಿಮ್ಮ ಸಹಕಾರ ಕೊಡಿ ಅಂತ. ನಾವು ದ್ವೇಷದ ರಾಜಕಾರಣ ಮಾಡಲ್ಲ ಅಂತ ಹೇಳ್ತಾರೆ. ಜಿಲ್ಲೆಯಲ್ಲಿ ದಸರಾ ಮಹೋತ್ಸವ ನಡೆಯುತಿದ್ದು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಇಂತಹ ಸಂಧರ್ಭದಲ್ಲಿ ಜಿಲ್ಲೆಯ ನಂಜನಗೂಡು, ತಿ.ನರಸೀಪುರ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿ ರದ್ಧುಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಗಳನ್ನು ಅತೀ ತುರ್ತು ಅಂತ ರದ್ದುಪಡಿಸಿದ್ದಾರೆ. ಹಣ ಬಿಡುಗಡೆ ಮಾಡಿ ಒಂಬತ್ತು ತಿಂಗಳು ಆದ ಮೇಲೆ ಹಣ ಬಿಡುಗಡೆಗೆ ರದ್ದುಪಡಿಸಿದ್ದಾರೆ. ಇದು ಬಿಜೆಪಿಯರ ಸೇಡಿನ ರಾಜಕೀಯ ಅಲ್ವಾ. ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದನ್ನು ರದ್ದು ಮಾಡಿದ್ದಾರೆ. ಈ ಆದೇಶವನ್ನು ಕೂಡಲೆ ವಾಪಾಸ್ ಪಡೆಯಬೇಕು ಇಲ್ಲವಾದ್ರೆ ಹೋರಾಟ ಮಾಡ್ತಿವಿ. ಸದನದ ಒಳಗೂ ಹಾಗೂ ಹೊರಗಡೆ ಸಹ ನಾವು ಹೋರಾಟ ಮಾಡ್ತಿವಿ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯುತ್ತೇವೆ.
ಮೈಸೂರು ಜಿಲ್ಲೆಯ ಜೆಡಿಎಸ್ , ಕಾಂಗ್ರೆಸ್ ಶಾಸಕರಿಗೆ ನೀಡಿದ್ದ ಅನುದಾನ ವಾಪಾಸ್ ಗೆ ಆದೇಶ ಮಾಡಿದ್ದಾರೆ. ಒಟ್ಟು ಎಂಬತ್ತು ಕೋಟಿಯಷ್ಟು ಕಾಮಗಾರಿಯನ್ನು ತಡೆಹಿಡಿದಿದ್ದಾರೆ.
ಇದು ಸೇಡಿನ ರಾಜಕೀಯದ ಉದ್ದೇಶವಲ್ಲದೆ ಬೇರೆ ಏನಿದೆ. ಬಿಜೆಪಿ ಶಾಸಕರು ಇರುವ ಕಡೆ ಯಾವುದೇ ಕಾಮಗಾರಿ ರದ್ದು ಮಾಡಿಲ್ಲ.

ಮಾಜಿ‌ ಸಚಿವ ಜಿ ಟಿ ದೇವೇಗೌಡ ಬಿಜೆಪಿ ನಾಯಕರ ಜತೆ ಹೆಚ್ಚು ಕಾಣಿಸಿಕೊಳ್ಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾ.ರ.ಮಹೇಶ್ ಹೇಳಿದಿಷ್ಟು…
ನಾವು ಅವರ ಜತೆ ಕುಳಿತು ಒಮ್ಮೆ ಮಾತಕತೆ ಮಾಡ್ತಿವಿ. ನಿನ್ನೆ ನಗರ ಪಾಲಿಕೆ ಜೆಡಿಎಸ್ ಸದಸ್ಯರು ಜಿಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನಾವೆಲ್ಲ ಒಮ್ಮೆ ಹೋಗಿ ಮಾತಾಡಿಸ್ತಿವಿ. ಸ್ವಲ್ಪ ದಿನಗಳ ಕಾಲ‌ತಟಸ್ಥವಾಗಿ ಇರ್ತಿನಿ ಅಂತ ಅವರು ತಿಳಿಸಿದ್ದಾರೆ. ಜಿ ಟಿ ದೇವೇಗೌಡ ನಮ್ಮ‌ಹಿರಿಯ ನಾಯಕರಾಗಿದ್ದಾರೆ. ಅವರು ನನ್ನನು ಆಕ್ಟಿಂಗ್ ಸಿಎಂ ಅಂದಿದ್ದಾರೆ.
ಅವರ ದೃಷ್ಟಿಯಿಂದ ನಾನು ಬಹಳ‌ ಬುದ್ದಿವಂತ ಅಂತ ಹೇಳಿದ್ದಾರೆ. ಆದ್ರೆ ನನ್ನ ಪ್ರಕಾರ ನಾನು ದಡ್ಡ ಅಂತ ಅಂದ್ಕೊಂಡಿದ್ದೇನೆ.

key words : bjp-stop-tender-allocation-mysore-jds-mla-mahesh