ಮೀಸಲಾತಿ ವಿರೋಧಿ ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ…

ಮೈಸೂರು,ಜನವರಿ,13,2021(www.justkannada.in): ಬಿಜೆಪಿಯವರು ಮೀಸಲಾತಿ ವಿರೋಧಿಗಳು. ಬಿಜೆಪಿಯವರು ಯಾವತ್ತು ಮೀಸಲಾತಿ ಪರ ಇಲ್ಲ ಅಂತಹವರಿಗೆ ಮಣೆ ಹಾಕಬೇಡಿ. ಮುಂದೆ ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ ನುಡಿದರು.jk-logo-justkannada-mysore

ಮೈಸೂರಿನಲ್ಲಿ  ಇಂದು ಗ್ರಾಮ ಜನಾಧಿಕಾರ ಸನ್ಮಾನ‌ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ,  ನಾನು ಹಣಕಾಸಿನ ಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಮೀಸಲಾತಿ ತಂದಿದ್ದು ನಾನು. ಈ ಬಗ್ಗೆ ಬಿಜೆಪಿಯವರು ಇಲ್ಲ ಎಂದು ಹೇಳಲಿ ನೋಡೊಣ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮೀಸಲಾತಿ ತಂದಿದ್ದೇವೆ. ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ನೀಡಿದ್ರು. ಮೀಸಲಾತಿ ವಿರೋಧ ಮಾಡಿದವರು ಬಿಜೆಪಿಯವರು. ಇಂತಹವರಿಗೆ ಪಂಚಾಯತಿ ಸದಸ್ಯರು ಬೆಂಬಲ ಕೊಡ್ತಿರಾ‌.? ಬಿಜೆಪಿಯವರು ಮೀಸಲಾತಿ ವಿರೋಧಿಗಳು. ನಾನು ಸುಳ್ಳು ಹೇಳ್ತಿಲ್ಲ, ಬೇಕಿದ್ರೆ ಎಲ್ಲಾ ಹಿರಿಯ ನಾಯಕರನ್ನು ಕೇಳಿ. ಬಿಜೆಪಿಯವರು ಯಾವತ್ತು ಮೀಸಲಾತಿ ಪರ ಇಲ್ಲ ಅಂತಹವರಿಗೆ ಮಣೆ ಹಾಕಬೇಡಿ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಶೇ 24.1ರಷ್ಟು ಮೀಸಲಾತಿ ನೀಡಿ ಕಾನೂನು ಮಾಡಿ ಜಾರಿಗೆ ತಂದಿದ್ದು ನಾನು. ಇದನ್ನ ಗ್ರಾ.ಪಂ ಸದಸ್ಯರು ಜನರ ಬಳಿ ಹೇಳಬೇಕು. ಇಡೀ ದೇಶದಲ್ಲಿ ಮೀಸಲಾತಿ ಬಗ್ಗೆ ಕಟ್ಟುನಿಟ್ಟಿನ ಕಾನೂನು ಮಾಡಿದ್ದ ಸಿದ್ದರಾಮಯ್ಯ ಸರ್ಕಾರ. ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಹೊಡೆದು ಹಾಕಿತು. ಅದಕ್ಕೆ ಪರ್ಯಾಯವಾಗಿ ಕಾನೂನು ಮಾಡಿ ಜಾರಿಗೆ ತಂದಿದ್ದು ನಾನು ಎಂದು ಸಿದ್ಧರಾಮಯ್ಯ ಹೇಳಿದರು.

ಸಿಎಂ ಬಿಎಸ್ ವೈ ವಿರುದ್ಧ ಏನವಚನದಲ್ಲೇ ವಾಗ್ದಾಳಿ….

ಯಡಿಯೂರಪ್ಪ ಸುಳ್ಳು ಹೇಳಿದ್ದಾನೆ. ರಾಜ್ಯದಲ್ಲಿ ಬಿಜೆಪಿ ಶೇ.60ರಷ್ಟು ಸ್ಥಾನ ಗೆದ್ದಿದೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ಬಹುತೇಕ ಗ್ರಾ. ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. 100 ಕ್ಕೆ 70% ಬೆಂಬಲಿಗರು ಗೆದ್ದಿದ್ದಾರೆ. ಹಾಗಾಗಿ ಅವರನ್ನು ತಮ್ಮತ್ತ ಸೆಳೆದುಕೊಳ್ಳು ಬಿಜೆಪಿ ಅವರು ಯತ್ನಿಸುತ್ತಿದ್ದಾರೆ. ಮೈಸೂರು‌ ಜಿಲ್ಲೆಯಲ್ಲಿ ಕಾಂಗ್ರೆಸ್ ನಂಬರ್ ಒನ್, ಜೆಡಿಎಸ್ ನಂಬರ್ ಟು, ಬಿಜೆಪಿ ನಂಬರ್ ತ್ರೀ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ನಂಬರ್ ಒನ್, ಬಿಜೆಪಿ ನಂಬರ್ ಟು, ಜೆಡಿಎಸ್ ನಂಬರ್ ತ್ರೀ ಸ್ಥಾನದಲ್ಲಿದೆ. ಇದನ್ನೇ ಆಧಾರವಾಗಿಟ್ಟುಕೊಂಡರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.

ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್….

ಹಾಗೆಯೇ ನಮ್ಮ ಹಾಗೂ ಜೆಡಿಎಸ್ ಎಂ ಎಲ್ ಎಗಳನ್ನ ಕೊಂಡುಕೊಂಡು ಯಡಿಯೂರಪ್ಪ ಸಿಎಂ ಆಗಿದ್ದಾರೆ. 17 ಮಂದಿ ಪೈಕಿ 14 ಮಂದಿ ಕಾಂಗ್ರೆಸ್ ಶಾಸಕರು, 3 ಮಂದಿ ಜೆಡಿಎಸ್ ಶಾಸಕರು ಬಿಜೆಪಿ ಗೆ ಹೋದರು. ಆದರೂ ಕೂಡ ಹೆಚ್ ಡಿ ಕುಮಾರಸ್ವಾಮಿ ಮಾತ್ರ ಸಿದ್ದರಾಮಯ್ಯ ಆಪ್ತರು ಬಿಜೆಪಿ ಗೆ ಹೋಗಿದ್ದಾರೆ ಅಂತಾರೆ. ಹಾಗಾದರೆ ಜೆಡಿಎಸ್ ನಿಂದ ಬಿಜೆಪಿಗೆ ಹೋದ ಮೂವರು ಶಾಸಕರು ನಿಮಗೇನಾಗಿದ್ದರು..? ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಸಿದ್ಧರಾಮಯ್ಯ ಟಾಂಗ್ ನೀಡಿದರು.Suggestion-without-discussion-CowslaughterBill-Government-cowardice-Opposition-leader-Siddaramaiah 

ಮುಂದೆ ಅಧಿಕಾರಕ್ಕೆ ಬರೋದು ಕಾಂಗ್ರೆಸ್.  ಯಡಿಯೂರಪ್ಪ ಜನರ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿಲ್ಲ. 17 ಶಾಸಕರಿಗೆ ಹಣ, ಅಧಿಕಾರ ಕೋಡ್ತಿವಿ ಅಂದಿದಕ್ಕೆ  ಹೋದ್ರು. ಅವರಿಗೆ ಮಮಾನ ಮರ್ಯಾದೆ ಇಲ್ಲ.ಅದಕ್ಕೆ ಅವರು ಬಿಜೆಪಿಗೆ ಹೋದರು. ನೀವು ಹಾಗೆಲ್ಲಾ ಮಾಡಬೇಡಿ. ನಿಮಗೆ ಮಾನ ಮರ್ಯಾದೆ ಇದೆ. ಮಾನ ಮರ್ಯಾದೆ ಇಲ್ಲದವ್ರು ಹಣ, ಅಧಿಕಾರಕ್ಕಾಗಿ ಹೋದ್ರು. ನೀವು ಮಾನ ಮರ್ಯಾದೆ ಇರುವವರಾಗಿರುವುದುದರಿಂದ ನೀವು ಹೋಗಬಾರದು. ನೂತನ ಗ್ರಾಮ ಪಂಚಾಯತಿ ಸದಸ್ಯರಿಗೆ ಪಕ್ಷ ಬಿಟ್ಟು ಹೋಗಬೇಡಿ ಮುಂದೆ ನಾವೇ ಅಧಿಕಾರಕ್ಕೆ  ಬರುತ್ತೇವೆ ಎಂದು ನೂತನ ಸದಸ್ಯರಿಗೆ ಸಿದ್ಧರಾಮಯ್ಯ ಭರವಸೆ ನೀಡಿದರು.

ENGLISH SUMMARY….

“Anti-reservation party BJP won’t come to power again at any cost” – former CM Siddu predicts
Mysuru, Jan. 13, 2021 (www.justkannada.in): “BJP people are against reservation policies. They never fight for reservation. Reject them. BJP won’t come to power again at any cost,” said former CM Siddaramaiah.
He participated in the Gram Janaadhikara felicitation programme in Mysuru today. “While I was the finance minister I was the one who introduced reservation to women. Let the BJP people refuse it. We introduced the reservation by amending the constitution. Former Prime Minister Rajiv Gandhi gave 50% reservation to women. It is the BJP that opposed reservation. Will you support such people? They are anti-reservation. I am not telling lies, you can clarify with any leaders,” he explained.
Keywords: BJP is against reservation/ former CM Siddaramaiah/ Gram Janaadhikara program

Key words: BJP -will not -come – power -Former CM- Siddaramaiah