ಬೆಂಗಳೂರು, ಅಕ್ಟೋಬರ್, 8,(www.justkannada.in): ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳ ಪ್ರಬುದ್ಧ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದು, ನಾಲ್ವರು ಅಭ್ಯರ್ಥಿಗಳಿಗೆ ಗೆಲವು ನಿಶ್ಚಿತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನಪರಿಷತ್ ಆಗ್ನೇಯ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಾದ ಪುಟ್ಟಣ್ಣ ಮತ್ತು ಚಿದಾನಂದಗೌಡ ಅವರ ನಾಮಪತ್ರ ಸಲ್ಲಿಕೆ ಬಳಿಕ ಸಚಿವ ಡಾ.ಕೆ.ಸುಧಾಕರ್ ಮಾತನಾಡಿದರು.
“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಸಮರ್ಥ ಆಡಳಿತದ ಮೂಲಕ ಪದವೀಧರ ಮತ್ತು ಶಿಕ್ಷಕ ಸಮುದಾಯದ ಮನ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ನಾಲ್ವರು ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲವು ನಿಶ್ಚಿತ” ಎಂದರು.
“ವಿಧಾನಪರಿಷತ್ತು ಶಕ್ತಿಶಾಲಿ ಆಗಬೇಕು ಎಂದಾದರೆ, ಪುಟ್ಟಣ್ಣ ಮತ್ತು ಚಿದಾನಂದಗೌಡರಂತಹ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಸರ್ಕಾರದ ಪರ ಪ್ರಜ್ಞಾವಂತ ಮತದಾರರು ಬೆಂಬಲ ನೀಡಲು ಇದು ಸೂಕ್ತ ವೇದಿಕೆ. ಪಕ್ಷದ ಪರವಾದ ವಾತಾವರಣ ಎಲ್ಲೆಡೆ ಕಂಡುಬರುತ್ತಿದೆ. ಹೀಗಾಗಿ ಗೆಲವು ನಮ್ಮದೇ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಜ್ಞರೊಂದಿಗೆ ಚರ್ಚೆ
ಶಾಲೆ, ಕಾಲೇಜು ಆರಂಭಿಸುವ ವಿಷಯದಲ್ಲಿ ಸರ್ಕಾರಕ್ಕೆ ಯಾವುದೇ ತರಾತುರಿ ಇಲ್ಲ. ಈ ಕುರಿತು ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಈಗಾಗಲೇ ಸಮಿತಿ ಅನೇಕ ಸಭೆಗಳನ್ನು ನಡೆಸಿ ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಇತರೆ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳನ್ನೂ ಪರಿಶೀಲಿಸಿ ತಜ್ಞರು ವರದಿ ನೀಡಲಿದ್ದಾರೆ. ವರದಿ ಆಧರಿಸಿ ಮುಖ್ಯಮಂತ್ರಿ ಅವರು ಸಚಿವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ವಿಷಯದಲ್ಲಿ ಯಾವುದೇ ಆತುರವಿಲ್ಲ” ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ, “ಶಿರಾ ಮತ್ತು ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇನ್ನೂ ಪ್ರಕಟಿಸಿಲ್ಲ. ನಮ್ಮ ಹೈಕಮಾಂಡ್ ಮುನಿರತ್ನ ಅವರ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ” ಎಂದು ಸಚಿವ ಸುಧಾಕರ್ ತಿಳಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶಾಸಕರಾದ ಎಂ.ಪಿ. ನಾರಾಯಣ ಸ್ವಾಮಿ, ತಿಪ್ಪಾರೆಡ್ಡಿ, ಜ್ಯೋತಿ ಗಣೇಶ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಉಪಸ್ಥಿತರಿದ್ದರು.
Summary…
BJP will win all 4 Teachers and Graduate constituencies – Minister Dr.K.Sudhakar
Sensible Voters support BJP
No hurry to reopen school, will decide after experts submit the report
Bengaluru: Matured voters of Teachers constituency and graduate constituency will support BJP and we will win all 4 seats, says Medical Education Minister Dr.K.Sudhakar. He was speaking to the media after filing nominations of BJP candidates Puttanna and Chidananda Gowda for South-East Teachers and Graduate constituencies respectively.
B.S.Yediyurappa led BJP government has won the hearts of teachers and graduate constituency voters. It will be a clear victory for all 4 BJP candidates in the upcoming elections he said. There is a need to elect candidates like Puttanna and Chidananda Gowda to strengthen the Legislative Council. It is the right platform for the matured voters to support. There is a BJP wave everywhere. We will emerge victorious said Dr.Sudhakar.
Will Discuss with Experts
Government is no hurry to open schools and colleges. A committee of experts has been formed to submit a report regarding this. The committee has studied other states models and conducted various meetings on this issue. Hon’ble CM will discuss with the expert committee before arriving to a conclusion. The Minister clarified.
Answering to the questions of the media people regarding BJP candidates for RR Nagar and Sira constituency, Dr Sudhakar said that, the candidate has not been finalized and we are fully confident that High command will consider Muniratna’s name while announcing the candidates.
Chief Minister B.S.Yediyurappa, DCM Dr.Ashwath Narayan, BJP National Secretary C.T.Ravi, MLAs, Tippareddy, Jyoti Ganesh, M.P.Narayana Swamy, MLC Ravi Kumar and others were present during nomination filing process.
Key words: BJP -win -all 4 Teachers and Graduate- constituencies – Minister -Dr.K.Sudhakar