ಶಾಸಕ ಪೊನ್ನಣ್ಣ ವಿರುದ್ದ ಪೋಸ್ಟ್,: ಬಂಧನದಿಂದ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಬೆಂಗಳೂರು,ಏಪ್ರಿಲ್,4,2025 (www.justkannada.in): ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರ ವಿರುದ್ದ ಅಪಹಾಸ್ಯದ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ಕೇಸ್ ದಾಖಲಿಸಿ ಪೊಲೀಸರು ಬಂಧಿಸಿದ್ದಕ್ಕೆ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾದವರು. ಬೆಂಗಳೂರಿನ ನಾಗವಾರದಲ್ಲಿರುವ ತನ್ನ ಬಿಜೆಪಿ ಕಚೇರಿಯಲ್ಲಿ ವಿನಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಶಾಸಕ ಪೊನ್ನಣ್ಣ ಅವರ ವಿರುದ್ದ ವಾಟ್ಸಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿತ್ತು. ವಿನಯ್ ಆ ವಾಟ್ಸಪ್ ನ ಅಡ್ಮಿನ್ ಆಗಿದ್ದರು. ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತ ತೆನ್ನೀರ್ ಮೈನಾ ಎಂಬುವವರು ಈ ಕುರಿತು ದೂರು ನೀಡಿದ್ದರು.

ದೂರು ಆಧರಿಸಿ ಪೊಲೀಸರು ವಿನಯ್ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಿದ್ದರು. ತನ್ನನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮನನೊಂದು ವಿನಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಮುನ್ನ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿನಯ್ ಪೋಸ್ಟ್ ಮಾಡಿದ್ದಾರೆ.

Key words: Post, against, MLA Ponnanna, BJP ,worker, commits, suicide