ಬೆಂಗಳೂರು,ಸೆಪ್ಟೆಂಬರ್,20,2020(www.justkannada.in) : ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕೊರನಾ ಹಿನ್ನೆಲೆ 3 ದಿನಕ್ಕೆ ಅಧಿವೇಶನ ಮೊಟಕುಗೊಳಿಸುವಂತೆ ಹೇಳುತ್ತಿದ್ದಾರೆ. ಪ್ರಜಾಪ್ರಭುತ್ವ ಮುಗಿಸುವುದಕ್ಕೆ ಬಿಜೆಪಿ ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.ಯಡಿಯೂರಪ್ಪ ಅವರು ನನಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೂರು ದಿನಕ್ಕೆ ಮೊಟಕುಗೊಳಿಸಿ ಸಹಕಾರ ನೀಡುವಂತೆ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಬರ, ನೆರೆ ಸ್ಥಿತಿ, ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕೇಂದ್ರ ಸರಕಾರ ಪರಿಹಾರ ಕೊಡುತ್ತಿಲ್ಲ. ಈ ಎಲ್ಲದರ ಬಗ್ಗೆ ಚರ್ಚೆಯಾಗಬಾರದೇ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಸದನ ಜಾಸ್ತಿ ನಡೆದರೆ ಇವರ ಭ್ರಷ್ಟಚಾರ ಬೆಳಕಿಗೆ ಬರುತ್ತದೆ. ಇವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಹೀಗಾಗಿ, ಸರಕಾರವು ಮಾಡಿರುವ ಭ್ರಷ್ಟಚಾರಕ್ಕೆ ನಾವು ಸಹಕಾರ ನೀಡುವುದಿಲ್ಲ. ಸಿಎಂ ಬಿಎಸ್ ವೈ ಅಧಿವೇಶನವನ್ನು 3 ದಿನಕ್ಕೆ ಮೊಟಕುಗೊಳಿಸುವಂತೆ ಕರೆ ಮಾಡಿದ್ದು ತಪ್ಪು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
key words : BJP-end-democracy-Going-out-BSK vs DKshi-spark