ಬೆಂಗಳೂರು,ಅಕ್ಟೋಬರ್,24,2020(www.justkannada.in) : ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಕೊರೊನ ಪರಿಸ್ಥಿತಿ ನಿರ್ಲಕ್ಷಿಸಿದ್ದರಿಂದ ಆಟೋ, ಟ್ಯಾಕ್ಸಿ ಚಾಲಕರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದರೂ, ಕಣ್ಣು, ಕಿವಿ, ಹೃದಯವಿಲ್ಲದ ಬಿಜೆಪಿ ಸರ್ಕಾರಗಳಿಗೆ ಅವರ ದುಃಸ್ಥಿತಿ ಕಾಣಿಸಲೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶವ್ಯಕ್ತಪಡಿಸಿದ್ದಾರೆ.
ಕೋವಿಡ್ ಕಾರಣಕ್ಕೆ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿ, ದೇಶದ ಜನರು ಸಹಕಾರ ನೀಡುವಂತೆ ಕೋರಿತು. ಅಂತೆಯೇ ದಿನದ ಬದುಕು ಕಳೆದುಕೊಳ್ಳುವ ಭೀತಿಯಲ್ಲಿಯೂ ಆಟೋ, ಟ್ಯಾಕ್ಸಿ ಚಾಲಕರು ಸಂಪೂರ್ಣ ಸಹಕಾರ ನೀಡಿದರು. ಹೀಗಿದ್ದರೂ ಕಣ್ಣು, ಕಿವಿ, ಹೃದಯ ಇಲ್ಲದ ಬಿಜೆಪಿ ಸರ್ಕಾರಗಳಿಗೆ ಅವರ ದುಃಸ್ಥಿತಿ ಕಾಣಿಸಲಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಪ್ರತಿ ಚಾಲಕರಿಗೆ ತಿಂಗಳಿಗೆ 10,000 ಕೊಡುವಂತೆ ನಾವು ಮಾಡಿದ ಮನವಿಗೂ ಸರ್ಕಾರ ಸ್ಪಂದಿಸಲಿಲ್ಲ. ತಾವೇ ಘೋಷಿಸಿದಂತೆ 5000 ಹಣವನ್ನೂ ನೀಡಲಿಲ್ಲ. ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿದಿದೆ ಎಂದು ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ.
key words : BJP-government-without-eyes-ears-heart-D.K.Shivakumar- outrage