ಮೈಸೂರು,ಜನವರಿ,16,2021(www.justkannada.in) : ರಾಜ್ಯದಲ್ಲಿ ಸರ್ಕಾರವೇ ಜೀವಂತವಾಗಿಲ್ಲ, ಇನ್ನು ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಮಾಡುವುದರಿಂದ ಜನರ ಮೇಲೆ ಯಾವ ಪರಿಣಾಮ ಬೀರಲು ಸಾಧ್ಯ? ಬಿಜೆಪಿಯಲ್ಲಿ ಒಳಜಗಳ, ಭ್ರಷ್ಟಾಚಾರ, ಅತೃಪ್ತಿ ತಾಂಡವವಾಡುತ್ತಿದೆ, ಹೀಗಿರುವಾಗ ಅಭಿವೃದ್ಧಿ ಕೆಲಸಗಳು ದೂರದ ಮಾತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಪಡೆಯುವುದು ಪ್ರತಿಯೊಬ್ಬ ಶಾಸಕನ ಹಕ್ಕಾಗಿರುವಾಗ ಬ್ಲಾಕ್ಮೇಲ್ ಮಾಡುವ ಅಗತ್ಯವೇನಿದೆ. ಜಮೀರ್ ಅಹ್ಮದ್ ಅವರು ಹಣ ಬಿಡುಗಡೆ ಮಾಡಿ ಅಂತ ಮನವಿ ಮಾಡಿದ್ದಾರೆ, ಅದಕ್ಕೆ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆಗೆ ಶಿಫಾರಸು ಮಾಡಿದ್ದಾರೆ. ಆದೇಶಕ್ಕೂ, ಶಿಫಾರಸಿಗೂ ವ್ಯತ್ಯಾಸವಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಚಾಮರಾಜಪೇಟೆ ಕ್ಷೇತ್ರಕ್ಕೆ ನಮ್ಮ ಪಕ್ಷದ ಶಾಸಕ ಜಮೀರ್ ಅಹಮದ್ ಅವರು ಕೇಳಿದಷ್ಟು ಮುಖ್ಯಮಂತ್ರಿಗಳು ಅನುದಾನ ನೀಡಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಅರ್ಥವಿರುತ್ತಿತ್ತು. ಮಂತ್ರಿಗಿರಿ ಕೈತಪ್ಪಿದ್ದರಿಂದ ಹತಾಶರಾಗಿ ಆಡಿರುವ ಮಾತುಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ.ಕೃಷಿಗೆ ಮಾರಕವಾದ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ಕಾಂಗ್ರೆಸ್ ಪಕ್ಷ ನಿನ್ನೆ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಸಂಕ್ರಾಂತಿ ಹಬ್ಬದ ಕಾರಣಕ್ಕೆ ನಾವು ನಿನ್ನೆ ಪ್ರತಿಭಟನೆ ಮಾಡಿಲ್ಲ, ಈ ತಿಂಗಳ 20ನೇ ತಾರೀಖಿನಂದು ಪಕ್ಷದ ವತಿಯಿಂದ “ರಾಜಭವನ ಚಲೋ” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
key words : BJP-Innermost-Corruption-Dissatisfied-Leader-Opposition-Siddaramaiah-accused