ಹಾಸನ, ಫೆಬ್ರವರಿ 08, 2020 (www.justkannada.in): ಸಂವಿಧಾನದ ಪ್ರಕಾರ ಮೀಸಲಾತಿಯನ್ನು ಪರೋಕ್ಷವಾಗಿ ರದ್ದು ಮಾಡುವುದು ಬಿಜೆಪಿಗರ ಹಿಡನ್ ಅಜೆಂಡಾ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಕೊಟ್ಟ ಸಂವಿಧಾನದ ಅಡಿಯಲ್ಲಿ ಸಿಕ್ಕ ಮೀಸಲಾತಿಯನ್ನು ರದ್ದು ಮಾಡುವುದು ಇವರ ಹುನ್ನಾರ. ಮೀಸಲಾತಿ ತೆಗೆಯಲೆಂದೇ ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ನೇರವಾಗಿ ಮೀಸಲಾತಿ ರದ್ದುಮಾಡಲು ಆಗುವುದಿಲ್ಲ. ಅದಕ್ಕಾಗಿ ಎಲ್ಲಾ ಸಂಸ್ಥೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ದೇಶಕ್ಕೆ ಒಂದೇ ಒಂದು ಹೊಸ ವಿಶ್ವವಿದ್ಯಾಲಯ ಕೊಟ್ಟಿಲ್ಲ. ಕೊಟ್ಟಿದ್ದು ಮಾತ್ರ ವಾಟ್ಸಪ್ ಯುನಿವರ್ಸಿಟಿ ಎಂದು ವ್ಯಂಗ್ಯವಾಡಿದರು.