ಆರ್ ಎಸ್ ಎಸ್ ಮತ್ತು ಬಿಜೆಪಿಯವರು ಸಂವಿಧಾನ, ಅಂಬೇಡ್ಕರ್ ವಿರೋಧಿಗಳು –ಬಿಕೆ ಹರಿಪ್ರಸಾದ್

ಬೆಂಗಳೂರು,ಜನವರಿ,17,2025 (www.justkannada.in): ಆರ್ ಎಸ್ ಎಸ್ ಮತ್ತು ಬಿಜೆಪಿಯವರು ಸಂವಿಧಾನ, ಡಾ ಬಿ.ಆರ್ ಅಂಬೇಡ್ಕರ್ ವಿರೋಧಿಗಳು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಕೆ ಹರಿಪ್ರಸಾದ್, ದೇಶದ ಸಂವಿಧಾನ, ತ್ರಿವರ್ಣ ಧ್ವಜವನ್ನು ಒಪ್ಪದೇ ಇರುವುವವರು ಭಾರತದ ದೇಶದ ತಾಲೀಬಾನ್‌ ಗಳು. ಡಾ.ಬಿಆರ್ ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.  ಅಂಬೇಡ್ಕರ್ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿಬಿಟ್ಟಿದೆ ಎಂದಿದ್ದಾರೆ.  ಆರ್ ಎಸ್ಎಸ್  ಬಿಜೆಪಿಯವರು  ಅಂಬೇಡ್ಕರ್ ಸಂವಿಧಾನ ವಿರೋಧಿಗಳು.  ಆರ್ ಎಸ್ ಸಂವಿಧಾನದ ದ್ರೋಹಿಗಳು .  ಭಾಗವತ್ ಯಾರು? ಯಾವ ಸಂವಿಧಾನದ ಹುದ್ದೆ ನಿಭಾಯಿಸಿದ್ದಾರೆ ಎಂದು ಪ್ರಶ್ನಿಸಿದರು.

ಆರ್ ಎಸ್ ಎಸ್ ಬಗ್ಗೆ ಎಲ್ಲಿಯೂ ನೋಂದಣಿ ಆಗಿಲ್ಲ.  ಬೇರೆ ಬೇರೆ ಕಡೆ ಕೋಟ್ಯಾಂತರ ರೂ ಖರ್ಚು ಮಾಡಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಅವರಿಗೆ ಝಡ್ ಪ್ಲಸ್  ಭದ್ರತೆ ನೀಡಿದ್ದಾರೆ. ಮೋದಿ ಅಮಿತ್ ಶಾ ಭಾಗವತ್ ಎಂದೂ ರಾಷ್ಟ್ರಧ್ವಜ ಒಪ್ಪಿಲ್ಲ.  ಯಾರು ಸಂವಿಧಾನ ಒಪ್ಪುವುದಿಲ್ಲ ಅವರೆಲ್ಲಾ ತಾಲಿಬಾನಿಗಳು ಸಂವಿಧಾನ ಇರುವವರೆಗೂ ದೇಶ ಒಂದಾಗಿರುತ್ತೆ ಎಂದು ಬಿಕೆ ಹರಿಪ್ರಸಾದ್ ಹೇಳಿದರು.

Key words: RSS, BJP, against, Constitution, BK Hariprasad