ಬೆಂಗಳೂರು,ಫೆಬ್ರವರಿ,4,2021(www.justkannada.in): ಪ್ರೊ.ಕೆಎಸ್ ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರ ವಕೀಲಿಕೆಗೆ ನಿರ್ಬಂಧ ಹೇರುವಂತೆ ಪ್ರೊ.ಕೆಎಸ್ ಭಗವಾನ್ ಪರ ವಕೀಲ ಸೂರ್ಯ ಮುಕುಂದ್ ರಾಜ್ ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜತೆ ಮಾತನಾಡಿರುವ ಪ್ರೊ.ಕೆ.ಎಸ್ ಭಗವಾನ್ ಪರ ವಕೀಲ ಸೂರ್ಯ ಮುಕುಂದ್ ರಾಜ್, ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದು ಹಲ್ಲೆ ಮಾಡಿದ್ದಾರೆ. ಕೋರ್ಟ್ ಆವರಣದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ನ್ಯಾಯದ ಪರ ಕೆಲಸ ಮಾಡುವವರಿಂದಲೇ ಇಂತಹ ಕೃತ್ಯ ಸರಿಯಲ್ಲ. ಪ್ರೊ. ಭಗವಾನ್ ವಯಸ್ಸಿಗಾದರೂ ಬೆಲೆ ಕೊಡಬೇಕಾಗಿತ್ತು. ಇದು ವಕೀಲ ವೃತ್ತಿಗೆ ಮಾಡಿದ ಅಪಮಾನ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗೆಯೇ ಈ ಬಗ್ಗೆ ವಕೀಲರ ಸಂಘಕ್ಕೆ ದೂರು ನೀಡುತ್ತೇವೆ. ಮೀರಾ ರಾಘವೇಂದ್ರ ಅವರ ವಕೀಲಿಕೆಗೆ ನಿರ್ಬಂಧ ಹೇರುವಂತೆ ಆಗ್ರಹಿಸುತ್ತೇವೆ ಎಂದು ಸೂರ್ಯ ಮುಕುಂದ್ ರಾಜ್ ತಿಳಿಸಿದರು.
ಹಿಂದೂ ಧರ್ಮ ಹಾಗೂ ಶ್ರೀರಾಮನ ಬಗ್ಗೆ ಸದಾ ಅವಹೇಳನಕಾರಿ ಹೇಳಿಕೆಗಳನ್ನು ಸಾಹಿತಿ ಪ್ರೊ.ಭಗವಾನ್ ನೀಡುತ್ತಿದ್ದಾರೆ ಎಂದು ಆರೋಪಿಸಿ ವಕೀಲೆ ಮೀರಾ ರಾಘವೇಂದ್ರ ಇಂದು ಕೋರ್ಟ್ ಆವರಣದಲ್ಲೇ ಮುಖಕ್ಕೆ ಮಸಿ ಬಳಿದಿದ್ದರು.
Key words: black-ink-face -KS Bhagavan-lawyer-Meera Raghavendra – restraining –surya mukundraj