ಬೆಂಗಳೂರು,ನವೆಂಬರ್,19,2022(www.justkannada.in): ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ ನಡೆಯುತ್ತಿದೆ. ಬ್ಲ್ಯಾಕ್ ಮನಿ ವೈಟ್ ಮಾಡುವ ದಂಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ವೂಟರ್ ಐಡಿ ಅಕ್ರಮ ಸಂಬಂಧ ಈವರೆಗೆ ಸರ್ಕಾರ ಯಾರನ್ನೂ ಬಂಧಿಸಿಲ್ಲ. ಈ ಸಂಬಂಧ ಮಧ್ಯಾಹ್ನ 3 ಗಂಟೆಗೆ ಸುದ್ಧಿಗೋಷ್ಠಿ ನಡೆಸುತ್ತೇವೆ ಚಿಲುಮೆ ಕಚೇರಿಯಲ್ಲಿ ಹಣದ ಅವ್ಯವಹಾರ ಕೂಡ ನಡೆದಿದೆ.
ನೋಟ್ ಕೌಂಟಿಂಗ್ ಮಷಿನ್ ಕೂಡ ಅದೇ ಕಚೇರಿಯಲ್ಲಿದೆ. ಬ್ಲ್ಯಾಕ್ ಮನಿಯನ್ನ ವೈಟ್ ಮಾಡುವ ದಂಧೆ ನಡೆಯುತ್ತಿದೆ . ಇಂಧು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: black money- laundering- business – Chilume office-DK Shivakumar