ಬೆಂಗಳೂರು,ನವೆಂಬರ್,15,2020(www.justkannada.in) : ಗೆಳತಿಯೇ ವಿವಾಹವಾದ ತನ್ನ ಗೆಳತಿಗೆ ಮಾಜಿ ಪ್ರಿಯಕರನ ಹೆಸರಿನಲ್ಲಿ ಅಶ್ಲೀಲ ಫೋಟೊಗಳು ನನ್ನ ಬಳಿ ಇವೆ ಎಂದು ಬ್ಲಾಕ್ ಮೇಲ್ ಮಾಡಿ 1.25 ಕೋಟಿ ರೂ. ವಂಚಿಸಿದ್ದಾಳೆ.ವೈಟ್ ಫೀಲ್ಡ್ ನಿವಾಸಿಯಾಗಿರುವ ಮಹಿಳೆ ವಂಚನೆಗೆ ಒಳಗಾಗಿದ್ದು, ಮಾಜಿ ಪ್ರಿಯಕರನ ಹೆಸರಿನಲ್ಲಿ ಅಶ್ಲೀಲ ಫೋಟೊಗಳು ನನ್ನ ಬಳಿ ಇವೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ ಮಹಿಳೆಯ ಗೆಳತಿ ಹಂತ, ಹಂತವಾಗಿ 1.25 ಕೋಟಿ ರೂ. ವಸೂಲಿ ಮಾಡಿದ್ದಾಳೆ.
ಮಹೇಶ್ ಮತ್ತು ಅಪರ್ಣಾ ಎಂಬವರನ್ನು ಬಂಧನ
ಆಕೆಯ ಪತಿ ಈ ಕುರಿತು ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಮಹೇಶ್ ಮತ್ತು ಅಪರ್ಣಾ ಎಂಬವರನ್ನು ಬಂಧಿಸಿದ್ದಾರೆ. ಮಹಿಳೆಗೆ 10 ವರ್ಷಗಳ ಹಿಂದೆ ಮದುವೆಯಾಗಿದ್ದು, ಮದುವೆಗೂ ಮೊದಲು ಮಹೇಶ್ ಎಂಬುವನನ್ನು ಪ್ರೀತಿಸಿದ್ದರು. ಕುಟುಂಬದವರ ಒತ್ತಡಕ್ಕೆ ಮಣಿದು ಪೋಷಕರು ತೋರಿಸಿದ ಹುಡುಗನನ್ನು ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಡುವುದಾಗಿ ಬೆದರಿಕೆ
ಕಳೆದ ವರ್ಷ ಕರೆ ಮಾಡಿದ ವ್ಯಕ್ತಿಯೊಬ್ಬ ಹಳೆಯ ಪ್ರಿಯತಮ ಎಂದು ಪರಿಚಯಿಸಿಕೊಂಡಿದ್ದ. ನಂತರ ಅಪರ್ಣಾ ಕರೆ ಮಾಡಿ ತಾನು ನಿನ್ನ ಮಾಜಿ ಪ್ರಿಯಕರನ ಮಾಜಿ ಪ್ರೇಯಿಸಿ ಎಂದು ಗೆಳತಿಯಾಗಿದ್ದಳು. ನಂತರದಲ್ಲಿ ಮಹೇಶ್, ಮಹಿಳೆಗೆ ನಿನ್ನ ಅಶ್ಲೀಲ ಫೋಟೋ, ವಿಡಿಯೋ ತನ್ನ ಬಳಿ ಇರುವುದಾಗಿ ಹೇಳಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ತಿರುಚಿದ ಫೋಟೋ ಕಳಿಸಿ ಬೆದರಿಸಿದ್ದಾರೆ
ಆತನೊಂದಿಗೆ ಅಪರ್ಣಾ ಕೂಡ ಸೇರಿಕೊಂಡಿದ್ದು, ತಿರುಚಿದ ಫೋಟೋ ಕಳಿಸಿ ಬೆದರಿಸಿದ್ದಾರೆ. ಹೀಗೆ ಅಪರ್ಣಾ ಮತ್ತು ಮಹೇಶ್ ಸೇರಿಕೊಂಡು ಹಂತಹಂತವಾಗಿ 1.25 ಕೋಟಿ ರೂ. ಪಡೆದುಕೊಂಡಿದ್ದಾರೆ. ಹಣ ಕೊಟ್ಟು ಸಾಕಾದ ಮಹಿಳೆ ಗಂಡನಿಗೆ ವಿಷಯ ತಿಳಿಸಿದ್ದಾಳೆ. ನಂತರದಲ್ಲಿ ವೈಟ್ ಫೀಲ್ಡ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
key words : Blackmail-girlfriend-married-girlfriend-Rs 1.25-crore-Fraud