ಕಲಾಪ ಬಹಿಷ್ಕಾರ ಅವರ ಮುಖದ ಮೇಲೆ ಅವರೇ ಉಗುಳಿಕೊಂಡಂತೆ : ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು,ಡಿಸೆಂಬರ್,10(www.justkannada.in) : ರಾಜ್ಯದ ಜನರೇ ಕಾಂಗ್ರೆಸ್ನವರನ್ನು ಬಹಿಷ್ಕಾರ ಮಾಡಿದ ಮೇಲೆ ಇವರೇನು ಕಲಾಪ ಬಹಿಷ್ಕಾರ ಮಾಡುವುದು. ಕಲಾಪ ಬಹಿಷ್ಕಾರ ಮಾಡಿದರೆ ಇವರೇ ಇವರ ಮುಖದ ಮೇಲೆ ಉಗುಳಿಕೊಂಡಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

logo-justkannada-mysoreಕಾಂಗ್ರೆಸ್ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲ

ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು? ಒಂದು ಸಲ ಪಶ್ಚಾತ್ತಾಪದ ಧ್ವನಿಯಲ್ಲಿ ಮಾತಾನಾಡುತ್ತಾರೆ. ಮತ್ತೊಂದು ಸಲ ಗೋ ಹತ್ಯೆ ನಿಷೇಧ ಕಾಯ್ದೆ ವಿರೋಧಿಸುತ್ತಾರೆ. ಕಾಂಗ್ರೆಸ್ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲ ಎಂದು ಟೀಕಿಸಿದರು.

ಮಹಾತ್ಮಾ ಗಾಂಧಿ ಮರೆತ ಕಾಂಗ್ರೆಸ್ಸೇ?

ಯಾವ ಕಾಂಗ್ರೆಸ್ನವರು ನೀವು? ಮಹಾತ್ಮಾ ಗಾಂಧಿ ಮರೆತ ಕಾಂಗ್ರೆಸ್ಸೇ? ದನಗಳ್ಳರ ಪರ, ದನ ಕಡಿಯುವವರ ಪರ ನಿಂತಿರುವ ಕಾಂಗ್ರೆಸ್ಸೇ ಎಂದು ಪ್ರಶ್ನಿಸಿದರು.

 

ಕಾಂಗ್ರೆಸ್ ನವರ ಗೂಸೆಂಬುತನ ಬಯಲಾಗುತ್ತಿದೆ

ಕಾಂಗ್ರೆಸ್ನವರು ಕೃಷಿ ಸಂಸ್ಕೃತಿ ಎತ್ತಿ ಹಿಡಿಯಬೇಕು. ಕೃಷಿ ಸಂಸ್ಕೃತಿಗೆ ಬೆನ್ನೆಲುಬಾದ ಗೋ ಸಮೂಹ ಎತ್ತಿ ಹಿಡಿಬೇಕಾದದ್ದು ಎಲ್ಲರ ಕರ್ತವ್ಯ. ಕಾಂಗ್ರೆಸ್ ನವರ ಗೂಸೆಂಬುತನ ಬಯಲಾಗುತ್ತಿದೆ. ದನ ಕಾಯುವವರು ಯಾರೂ ದನ ಕೊಲ್ಲುವುದಕ್ಕೆ ಬೆಂಬಲ ಕೊಡಲ್ಲ ಎಂದು ವ್ಯಂಗ್ಯವಾಡಿದರು.

blonde-boycott-spat-face-C.T.Ravi-bartender

ಕಾಂಗ್ರೆಸ್ನವರು ಒಂದು ಸಲ ದನ ಕಾಯ್ತೀನಿ ಅಂತಾರೆ, ಇನ್ನೊಂದು ಸಲ ದನ ಕಡಿಯುವ ಬಗ್ಗೆಯೂ ಮಾತಾಡುತ್ತಾರೆ ಎಂದು ಸಿ.ಟಿ.ರವಿ ಟೀಕಿಸಿದ್ದಾರೆ.

 

key words : blonde-boycott-spat-face-C.T.Ravi-bartender