ಬೆಂಗಳೂರು, ಜ.೧೧,೨೦೨೫ : ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಸೋಮವಾರದಂದು ಬೆಳಿಗ್ಗೆ 4:15 ಕ್ಕೆ ಮೆಟ್ರೋ ಸೇವೆಗಳು ಪ್ರಾರಂಭವಾಗಲಿವೆ ಎಂದು ಘೋಷಿಸಿದೆ. ಹೊಸ ಸಮಯಗಳು ಜನವರಿ 13 ರಿಂದ ಜಾರಿಗೆ ಬರಲಿವೆ.
ವಾರಾಂತ್ಯವನ್ನು ಬೇರೆಡೆ ಕಳೆದ ನಂತರ ನಗರಕ್ಕೆ ಮರಳುವ ಪ್ರಯಾಣಿಕರಿಗೆ ಸಂಪರ್ಕವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಂಆರ್ಸಿಎಲ್ ವಕ್ತಾರರು ತಿಳಿಸಿದ್ದಾರೆ.
“ಪರಿಷ್ಕೃತ ಸಮಯಗಳು ಪ್ರಯಾಣಿಕರು ಬಂದ ತಕ್ಷಣ ಮೆಟ್ರೋ ಸೇವೆಗಳಿಗೆ ಪ್ರವೇಶವನ್ನು ಖಚಿತಪಡಿಸುತ್ತದೆ, ಅವರ ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ” ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಈ ವ್ಯವಸ್ಥೆಯಿಂದ ನಗರ ರೈಲ್ವೆ ನಿಲ್ದಾಣ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಂಜಾನೆಯೇ ನಗರಕ್ಕೆ ಆಗಮಿಸುವ ಪ್ರಯಾಣಿಕರು ತಮ್ಮ ನಿರ್ಧಿಷ್ಠ ಸ್ಥಳವನ್ನು ನಿಗಧಿತ ಸಮಯದೊಳಗೆ ತಲುಪಲು ಸಹಕಾರಿಯಾಗಲಿದೆ.
ಈ ಬದಲಾವಣೆ ವಾರದ ಮೊದಲ ದಿನ ಅಂದ್ರೆ ಸೋಮವಾರದಂದು ಮಾತ್ರ ಜಾರಿಯಲ್ಲಿರುತ್ತದೆ. ವಾರದ ಇತರ ದಿನಗಳಲ್ಲಿ ಮೆಟ್ರೋ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ. ಮಂಗಳವಾರದಿಂದ ಭಾನುವಾರದವರೆಗೆ ಅಸ್ತಿತ್ವದಲ್ಲಿರುವ ವೇಳಾಪಟ್ಟಿಯ ಪ್ರಕಾರ ಸೇವೆಗಳು ಮುಂದುವರಿಯಲಿದ್ದು, ಕಾರ್ಯಾಚರಣೆಗಳು ಬೆಳಿಗ್ಗೆ 5:00 ಗಂಟೆಗೆ ಪ್ರಾರಂಭವಾಗುತ್ತವೆ.
KEY WORDS: Bengaluru Metro Rail Corporation, BMRCL, Mondays at 4:15 am
SUMMARY:
Bengaluru Metro Rail Corporation Limited (BMRCL) announced that starting January 13, the metro services will begin earlier on Mondays, at 4:15 am instead of the usual time.