ನಮ್ಮ ಮೆಟ್ರೋದಲ್ಲಿ ಹೋಳಿ ಆಚರಣೆಗೆ ನಿರ್ಬಂಧ

ಬೆಂಗಳೂರು,ಮಾರ್ಚ್,14,2025 (www.justkannada.in): ಇಂದು ನಾಡಿನೆಲ್ಲಡೆ ಹೋಳಿ ಹಬ್ಬದ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಟ್ವಿಟ್ಟ್ ಮೂಲಕ ಹೋಳಿಹಬ್ಬದ ಶುಭಕೋರಿದ  ಬಿಎಂಆರ್ ಸಿಎಲ್ , ಮೆಟ್ರೋ ರೈಲಿನಲ್ಲಿ ಬಣ್ಣಗಳನ್ನ ತೆಗೆದುಕೊಂಡು ಹೋಗಲು ನಿರ್ಬಂಧಿಸಿದೆ.

ಹೌದು ಈ ಕುರಿತು ಟ್ವೀಟ್ ಮಾಡಿರುವ ಬಿಎಂಎಆರ್ ಸಿಎಲ್ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಹೋಳಿ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಿದೆ.  ಹೋಳಿ ಮುಗಿಯುವವರೆಗೂ ಮೆಟ್ರೋದಲ್ಲಿ ಬಣ್ಣಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಒಗ್ಗಟ್ಟು ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸಿ ಎಂದು ಪ್ರಯಾಣಿಕರಿಗೆ ಸುರಕ್ಷಿತ ಹೋಳಿ ಹಬ್ಬದ ಶುಭಾಶಯಗಳು. ಮೆಟ್ರೋದಲ್ಲಿ ಪ್ರಯಾಣಿಸಿ ಆದರೆ ಮೆಟ್ರೋದಲ್ಲಿ ಬಣ್ಣ ತರಬೇಡಿ.  ಒಗ್ಗಟ್ಟು, ಸಂತೋಷ ಮತ್ತು ವರ್ಣರಂಜಿತ ನೆನಪುಗಳ ಪ್ರಯಾಣದೊಂದಿಗೆ ಈ ಹೋಳಿ ಹಬ್ಬವನ್ನು ಆಚರಿಸೋಣ. #ಬಿಎಂಆರಸಿಎಲ್ ನಿಮಗೆ ಸುರಕ್ಷಿತ ಮತ್ತು ವರ್ಣರಂಜಿತ ಹೋಳಿಯನ್ನು ಹಾರೈಸುತ್ತದೆ ಎಂದು ಬಿಎಂಆರ್ ಸಿಎಲ್ ಟ್ವೀಟ್ ಮಾಡಿದೆ.

Key words: Ban, colours, Namma metro, BMRCL,  Holi wishes