ಮೈಸೂರು,ಜನವರಿ,21,2025 (www.justkannada.in): ಸಿಎಂ ಸಿದ್ದರಾಮಯ್ಯ ಕ್ಷೇತ್ರ ವರುಣ ವ್ಯಾಪ್ತಿಯ ನಗರ್ಲೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಗೆ ಗ್ರಾಮಕ್ಕೆ ನಿಷೇಧಿಸಲಾಗಿದೆ ಎಂದು ಬೋರ್ಡ್ ಹಾಕಲಾಗಿದೆ.
ಗ್ರಾಮದ ದಲಿತ ಸಮುದಾಯದಿಂದ ದಲಿತ ಸಮುದಾಯದ ಕಾಂಗ್ರೆಸ್ ಮುಖಂಡರ ವಿರುದ್ಧವೇ ಬೋರ್ಡ್ ಹಾಕಲಾಗಿದೆ. ಅಂಬೇಡ್ಕರ್ ಪ್ರತಿಮೆ ಮಾಡಿಸುತ್ತೇವೆ ಎಂದು ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್.ಸಿ ಮಹದೇವಪ್ಪರಿಂದ ದಲಿತ ಸಮುದಾಯಕ್ಕೆ ಭರವಸೆ ನೀಡಿದ್ದರು.
ಲೋಕಸಭಾ ಚುನಾವಣೆಗೂ ಮುನ್ನ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಗುದ್ದಲಿ ಪೂಜೆ ಮಾಡಿದ್ದರು. 3 ಲಕ್ಷ ರೂ. ನೀಡಿ ಬೆಸ್ ಮೆಂಟ್ ನಿರ್ಮಾಣ ಮಾಡಲಾಗಿದ್ದು, ಉಳಿದ ಕಾಮಗಾರಿಗೆ ಇನ್ನೂ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಡಲಾಗಿತ್ತು.
ಆದರೆ ಈಗ ಕೇವಲ 3 ಲಕ್ಷ ನೀಡುತ್ತೇವೆ ಎಂದು ಸಿಎಂ ಆಪ್ತ ಸಿಟಿ ಕುಮಾರ್ ಹೇಳಿದ್ದು, ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ ಮಹದೇವಪ್ಪ ಪರ ನಿಂತಿದ್ದ ನಗರ್ಲೆ ದಲಿತ ಸಮುದಾಯದ ನಾಯಕರ ವಿರುದ್ಧ ಸಿಡಿದ ದಲಿತ ಮುಖಂಡರು ಕಾಂಗ್ರೆಸ್ ಮುಖಂಡರಿಗೆ ಗ್ರಾಮಕ್ಕೆ ನಿಷೇಧಿಸಲಾಗಿದೆ ಅ ಎಂದು ಬೋರ್ಡ್ ಹಾಕಿದ್ದಾರೆ.
ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು. ಗ್ರಾಮಕ್ಕೆ ಕಾಂಗ್ರೆಸ್ ಮುಖಂಡರನ್ನು ನಿಷೇಧಿಸಲಾಗಿದೆ ಎಂದು ದಲಿತ ಸಮುದಾಯದ ಮುಖಂಡರು ಬೋರ್ಡ್ ಹಾಕಿದ್ದಾರೆ.
Key words: Ban, congress leaders, village, board, CM Siddaramaiah, constituency