ರಾಮನಗರ,ಜನವರಿ,10,2022(www.justkannada.in): ಸರ್ಕಾರ ಬೋಗಸ್ ಆಗಿ ಕೋವಿಡ್ ತಪಾಸಣೆ ಮಾಡುತ್ತಿದೆ. ಇವರೇ ಆಸ್ಪತ್ರೆಗೆ ಸೇರಿಸಿ ನಂಬರ್ ಹೆಚ್ಚಿಸುತ್ತಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಿನ್ನೆಯಿಂದ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು 2ನೇ ದಿನವಾಗಿದ್ದು ತಮ್ಮ ವಿರುದ್ಧ ಪ್ರಕರಣ ದಾಖಲು ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ನಮ್ಮ ಮೇಲೆ ಕೇಸ್ ಹಾಕಿದರೇ ಹಾಕಲಿ ಬಿಡಿ. ಇವರು ಭ್ರಷ್ಟಾಚಾರ ಮಾಡಿದ್ದು ಹಣ ದೋಚಿದ್ದು ಸರಿಯೇ..? ಬೋಗಸ್ ನಂಬರ್ ತೋರಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ. ತರಕಾರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏರ್ ಪೋರ್ಟ್ ನಲ್ಲಿ ಜನರ ಜೀವ ಹಿಂಡುತ್ತಿದ್ದಾರೆ. ಯಾರಾದ್ರೂ ಬುದ್ದಿ ಇರೋರು ಈ ರೀತಿ ಮಾಡ್ತಾರಾ..? ಎಂದು ಕಿಡಿಕಾರಿದರು.
ಗೃಹ ಸಚಿವರ ಸಲಹೆಯನ್ನ ಗೌರವದಿಂದ ಸ್ವೀಕರಿಸುತ್ತೇನೆ. ಸಚಿವ ಆರಗ ಜ್ಞಾನೇಂದ್ರ ಅಜ್ಞಾನದ ಜ್ಞಾನಿ ನಮ್ಮ ನಿರ್ಧಾರ ಅಚಲ ಪಾದಯಾತ್ರೆಯಿಂದ ಹಿಂದೆ ಸರಿಯಲ್ಲ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: Bogus-covid- checks – government-DK Shivakumar.