ಮುಂಬೈ:ಜೂ-25:(www.justkannada.in) ವಿಭಿನ್ನ ಉಡುಗೆಯಿಂದಲೇ ಗಮನಸೆಳೆಯುತ್ತಿರುವ ಬಾಲಿವುಡ್ ಮೋಸ್ಟ್ ಸ್ಟೈಲಿಶ್ ನಟಿ ದೀಪಿಕಾ ಪಡುಕೋಣೆ, ಮತ್ತೊಂದು ವಿಭಿನ್ನ ಹಾಗೂ ದುಬಾರಿ ಪ್ಯಾಂಟ್ ಧರಿಸಿ ಭಾರೀ ಸುದ್ದಿಯಾಗಿದ್ದಾರೆ.
ಫ್ಯಾಷನ್ ಮೋಹದ ಜತೆಗೆ ಡ್ರೆಸ್ ಬಗ್ಗೆ ತುಂಬಾ ಮುತುವರ್ಜಿ ವಹಿಸುವ ದೀಪಿಕಾ ಇತ್ತೀಚೆಗೆ ಸಿಲ್ವರ್ ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರ್ಟ್ ಹಾಗೂ ಮ್ಯಾಚಿಂಗ್ ರಿಂಗ್ಸ್ ಮತ್ತು ಹೈಹೀಲ್ಡ್ ಚಪ್ಪಲಿಯನ್ನು ಹಾಕಿಕೊಂಡು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಫೋಟೋದಲ್ಲಿ ದಿಪಿಕಾ ಧರಿಸಿದ್ದ ಪ್ಯಾಂಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅಂತೆಯೇ ಈ ಫೊತೋ ಕೂಡ ಇದೀಗ ಭಾರೀ ವೈರಲ್ ಆಗಿದೆ.
ದೀಪಿಕಾ ಧರಿಸಿರುವ ಈ ಸಿಲ್ವರ್ ಕಲರ್ ಪ್ಯಾಂಟಿನ ಬೆಲೆ ಬರೋಬ್ಬರಿ 816 ಯೂರೋಗಳಷ್ಟು. ಭಾರತ ಕರೆನ್ಸಿ ಪ್ರಕಾರ ಈ ಪ್ಯಾಂಟಿಗೆ ಬರೋಬ್ಬರಿ 64,400 ರೂಪಾಯಿ. ದೀಪಿಕಾಳ ಪ್ಯಾಂಟ್ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.