ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣ: ಪೊಲೀಸ್ ಆಯುಕ್ತರಿಂದ ಪರಿಶೀಲನೆ: ಕೆಂಜಾರು ಗ್ರೌಂಡ್ ಗೆ ಬಾಂಬ್ ಸ್ಥಳಾಂತರ…

ಮಂಗಳೂರು,ಜ,20,2020(www.justkannada.in): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ಸಂಬಂಧ ಏರ್ ಪೋರ್ಟ್ ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಂಬ್ ಪತ್ತೆಯಾದ ಬಳಿಕ ಮಂಗಳೂರು ಏರ್ ಪೋರ್ಟ್ ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಡಾ.ಹರ್ಷ ವಿಮಾನ ನಿಲ್ದಾಣದ ಎಲ್ಲಾ ಕಡೆ ಪರಿಶೀಲನೆ ನಡೆಸಿದರು. ಇನ್ನು ಏರ್ ಪೋರ್ಟ್ ನಲ್ಲಿ ಎಲ್ಲಾ ಅಂಗಡಿಗಳನ್ನು ಪೊಲೀಸರು ಕ್ಲೋಸ್  ಮಾಡಿಸಿದ್ದಾರೆ. ಕೆಳಮಹಡಿ ಮೊದಲ ಅಂತಸ್ತಿನ ಎಲ್ಲಾ ಅಂಗಡಿಗಳು ಕ್ಲೋಸ್ ಮಾಡಲಾಗಿದೆ.

ಈ ನಡುವೆ ಪತ್ತೆಯಾದ ಸಜೀವ ಬಾಂಬ್ ಅನ್ನ  ಕೆಂಜಾರು ಮೈದಾನದಲ್ಲಿ ಸ್ಥಳಾಂತರಿಸಲಾಗುತ್ತಿದ್ದು, ಮೈದಾನದಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಪತ್ತೆಯಾದ ಬ್ಯಾಗ್ ನಲ್ಲಿ ಐಇಡಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿವೆ.  ಅದನ್ನ ನಾವು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿದ್ದೇವೆ ಎಂದು ಸಿಐಎಸ್ ಎಫ್ ಡಿಐಜಿ ಅನಿಲ್ ಪಾಂಡೆ ತಿಳಿಸಿದ್ದಾರೆ.

Key words: Bomb- detection-case – Mangalore airport-Inspection –  Police Commissioner