ಯಾದಗಿರಿ,ಸೆಪ್ಟಂಬರ್,10,2024 (www.justkannada.in): ಎನ್ಐಎ ಕೇಂದ್ರದ ಕೈಕೊಂಬೆಯಾಗಿದ್ದು, ಕೇಂದ್ರ ಹೇಳಿದಂತೆ ತನಿಖಾ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಹೀಗಾಗಿ ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ ದಾಳಿ ಸುದ್ದಿ ಸುಳ್ಳು ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಈ ಕುರಿತು ಇಂದು ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, ಎನ್ ಐಎ ವರದಿ ಕೊಟ್ಟಿದೆ ಅಂದರೆ ಎನ್ಐಎ ಅವರದ್ದೇ ಇದೆ. ಎನ್ ಐಎ ಅಧಿಕಾರಿಗಳು ಬೇಕಾದಂತೆ ವರದಿ ಕೊಡಬಹುದು. ಬೆದರಿಕೆ ಇದೆ ಅಂದರೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯ ಆಗಿದೆ ಎಂದರ್ಥ. ಹಾಗಾದರೆ ಪ್ರಧಾನಿ ಸ್ಥಾನಕ್ಕೆ ಮೋದಿ ಅವರು ರಾಜೀನಾಮೆ ಕೊಡುತ್ತಾರಾ? ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿಯು ಕಳೆದ ಒಂದು ವರ್ಷದಿಂದ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದೆ. ಶಾಸಕರನ್ನು ಖರೀದಿ ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ. ಆದರೆ ಯಾರೂ ಸಹ ಬಿಜೆಪಿಯವರ ಬಲೆಗೆ ಬೀಳುವುದಿಲ್ಲ. ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. ಚುನಾಯಿತ ಸರ್ಕಾರವನ್ನು ಆಭದ್ರ ಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ 5 ವರ್ಷ ಅಲ್ಲ 10 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಶರಣಬಸಪ್ಪ ದರ್ಶನಾಪುರ ವಿಶ್ವಾಸ ವ್ಯಕ್ತಪಡಿಸಿದರು.
Key words: bomb threat, state BJP office, false, Sharanbasappa Darshanapura