ಮೈಸೂರು,ಫೆಬ್ರವರಿ,27,2025 (www.justkannada.in): ಮೈಸೂರು ಜಿಲ್ಲೆ ಎಚ್. ಡಿ ಕೋಟೆ ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದ ದಾಸಪ್ರಕಾಶ್ ಎಂಬುವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಮನುಷ್ಯನ ಬುರುಡೆ, ಮೂಳೆಗಳು ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಹತ್ತು ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ದಾಸಪ್ರಕಾಶ್ ಮತ್ತು ಅವರ ತಂದೆ ಜೇಕಬ್ ಚಿನ್ನಪ್ಪ ಪಾಳ್ಯ ಗ್ರಾಮದ ಮನೆಯಲ್ಲಿ ವಾಸವಾಗಿದ್ದರು. ಏಳು ತಿಂಗಳ ಹಿಂದೆ ಮಗ ದಾಸಪ್ರಕಾಶ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. . ಮೂರು ತಿಂಗಳ ಹಿಂದೆ ದಾಸಪ್ರಕಾಶ್ ತಂದೆ ಜೇಕಬ್ ಮೃತಪಟ್ಟಿದ್ದಾರೆ. ಜೇಕಬ್ ಸಾಯುವ ಮೂರುನಾಲ್ಕು ತಿಂಗಳ ಹಿಂದೆಯೇ ದಾಸಪ್ರಕಾಶ್ ಮೃತಪಟ್ಟ ಶಂಕೆ ವ್ಯಕ್ತವಾಗಿದೆ.
ಹೆಂಡತಿ- ಮಕ್ಕಳನ್ನ ನೋಡಿಕೊಳ್ಳದ ಕಾರಣ ದಾಸಪ್ರಕಾಶ್ ರನ್ನು ತೊರೆದು ಪತ್ನಿ ಪ್ರಿಯಾ ಹಾಗೂ ಮಕ್ಕಳು ದೂರ ಇದ್ದರು. ಇವರು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ದಾಸಪ್ರಕಾಶ್ ಆಗ್ಗಾಗ್ಗೆ ಕುಡಿದು ವರ್ಷಗಟ್ಟಲೆ ಮನೆ ತೊರೆಯುತ್ತಿದ್ದರು ಎನ್ನಲಾಗಿದ್ದು, ದಾಸಪ್ರಕಾಶ್ ನಾಪತ್ತೆಯಾದರೂ ತಂದೆ ಜೇಕಬ್ ಹಾಗೂ ಪತ್ನಿ ಪ್ರಿಯಾ ಯಾವುದೇ ದೂರು ನೀಡಿರಲಿಲ್ಲ.
ತಂದೆಯ ಜೊತೆ ಅನ್ಯೋನ್ಯವಾಗಿದ್ದ ದಾಸಪ್ರಕಾಶ್ ಆದರೆ ತಂದೆ ಜೇಕಬ್ ನಿಧನವಾದಾಗಲೂ ಬಂದಿರಲಿಲ್ಲ. ಸದ್ಯ ಇದೀಗ ಮನೆಯ ಶೌಚಾಲಯದ ಟ್ಯಾಂಕ್ ಕ್ಲೀನ್ ಮಾಡಿಸುವಾಗ ಮನುಷ್ಯನ ಮೂಳೆ, ಬುರುಡೆ ಸಿಕ್ಕಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಹೆಚ್ಚಾಗಿದ್ದು ಇದು ಕೊಲೆಯೋ? ಅಥವಾ ಇಲ್ಲವೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
Key words: bones, found, toilet pit, Murder, mystery, mysore