ಬೆಂಗಳೂರು, ಮೇ 30, 2020 (www.justkannada.in): ‘ಬುಕ್ ಮೈ ಶೋ’ ಕಂಪೆನಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದು, 270 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿದೆ.
ಸಿನಿಮಾ ಪ್ರದರ್ಶನಗಳಿಗೆ ಆನ್ಲೈನ್ ಮೂಲಕ ಟಿಕೆಟ್ ಹಂಚುತ್ತಿದ್ದ ಬುಕ್ ಮೈ ಶೋ ಲಾಕ್ಡೌನ್ ಸಮಯದಲ್ಲಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ.
ಕೊರೋನಾ ಲಾಕ್ಡೌನ್ನಿಂದಾಗಿ ಥಿಯೇಟರ್ಗಳು ಬಾಗಿಲು ಮುಚ್ಚಿವೆ. ಹೆಚ್ಚಿನ ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಕೆಲ ಸಿನಿಮಾಗಳು ಲಾಕ್ಡೌನ್ ಮುಗಿದ ನಂತರ ಥಿಯೇಟರ್ಗೆ ಬರಲು ಕಾಯುತ್ತಿವೆ. ಇಂತಹ ಸಮಯದಲ್ಲಿ ‘ಬುಕ್ ಮೈ ಶೋ ಸಂಸ್ಥೆಗೂ ದೊಡ್ಡ ಪೆಟ್ಟುಬಿದ್ದಿದೆ.