ಗಡಿವಿವಾದ ನಾಳೆ ಸುಪ್ರೀಂನಲ್ಲಿ ವಿಚಾರಣೆ: ಮುಕುಲ್ ರೋಹ್ಟಗಿ ಜೊತೆ ಚರ್ಚಿಸಿ ವಿವರಣೆ ನೀಡಿದ ಸಿಎಂ ಬೊಮ್ಮಾಯಿ.

ನವದೆಹಲಿ,ನವೆಂಬರ್29,2022(www.justkannada.in):  ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ನಾಳೇ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಿರಿಯ ವಕೀಲ ಮುಕುಲ್ ರೊಹ್ಟಗಿ ಅವರನ್ನ ಭೇಟಿ ಮಾಡಿ ಚರ್ಚಿಸಿದರು.

ಮುಕುಲ್ ರೋಹ್ಟಗಿ ಭೇಟಿ ಬಳಿಕ  ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಗಡಿ ವಿವಾದ ಬಗ್ಗೆ ನಾಳೇ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ  ಇದೆ.  ಗಡಿ ವಿವಾದದ ಬಗ್ಗೆ ಮುಕುಲ್ ರೋಹ್ಟಗಿಗೆ ವಿವರಣೆ ನೀಡಿದ್ದೇನೆ.  ಮಹಾರಾಷ್ಟ್ರ ಸರ್ಕಾರ ಹಾಕಿದ ಅರ್ಜಿ ಬಗ್ಗೆ ವಿಚಾರಣೆ ನಡೆಯಲಿದೆ. ವಾದಮಂಡನೆಯ ಸಿದ್ಧತೆ ಬಗ್ಗೆ ಮುಕುಲ್ ರೋಹ್ಟಗಿ ತಿಳಿಸಿದ್ದಾರೆ. ಕರ್ನಾಟಕ ಪರ ಸಮರ್ಥವಾಗಿ ವಾದ ಮಂಡಿಸುವ ವಿಶ್ವಾಸವಿದೆ ಎಂದರು.

ಮಹಾರಾಷ್ಟ್ರದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಕಲ್ಲು ತೂರಾಟ ಸಂಬಂಧ ಪ್ರತಿಕ್ರಿಯಿಸಿದ  ಸಿಎಂ ಬಸವರಾಜ ಬೊಮ್ಮಾಯಿ, ಮಹರಾಷ್ಟ್ರ ಗೃಹ ಇಲಾಖೆ ಜೊತೆ ನಮ್ಮ ಅಧಿಕಾರಿಗಳು ಮಾತನಾಡಿದ್ದಾರೆ ಜತ್ ತಾಲ್ಲೂಕು 42 ಗ್ರಾಮಗಳು ಕರ್ನಾಟಕಕ್ಕೆ ಸೇರುವ ಇಂಗಿತ ವಿಚಾರ ಸಂಬಂಧ,  ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸೇರಲು ಕೆಲ ನಿಯಮಗಳಿವೆ.  ಮೂಲ ಸೌಕರ್ಯ ಸಿಗದಿದ್ದ ಬಗ್ಗೆ ಬಹಳ ವರ್ಷದಿಂದ ಹೇಳುತ್ತಿದ್ದಾರೆ. ಗಡಿ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ ಈ ಬಗ್ಗೆ ಸರ್ವಪಕ್ಷ ಸಭೆ ಕರೆದು ಚರ್ಚಿಸುತ್ತೇನೆ. ಸಿದ್ಧರಾಮಯ್ಯ ಈ ಬಗ್ಗೆ ರಾಜಕೀಯವಾಗಿ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: border dispute – discussed -CM Bommai -Mukul Rohtagi.

ENGLISH SUMMARY…

SC hearing on border issue tomorrow: CM Bommai explains after discussing with Mukul Rohtagi
New Delhi, November 29, 2022 (www.justkannada.in): The dispute over the Karnataka-Maharashtra border issue will come for a hearing in the Hon’ble Supreme Court tomorrow. Chief Minister Basavaraj Bommai today met senior counsel Mukul Rohtagi in New Delhi and discussed.
Speaking to the media persons after he met Mukul Rohtagi, the Chief Minister said, “the hearing of the border issue will come up in the Supreme Court tomorrow. I have provided all the details to our counsel Mukul Rohtagi. The hearing over the Maharashtra Government’s appeal will be held tomorrow in the Supreme Court. Our advocate Mukul Rohtagi epxlained me about the preparations for our arguments. I believe he will present a strong argument.”
In his response to the incident of pelting stones on KSRTC buses in Maharashtra, Chief Minister Bommai informed that the officials concerned have contacted the Home Ministry of Maharasthra. Concerning the merger of 42 villages in Jat Taluk of Maharashtra, there are several rules and regulations concering merging of places from one state to another. The people of those villages have been alleging for many years about the poor infrastructure. However, the border issue is in Court. I will organize an all-party meeting on this issue. Siddaramaiah has given expressed his political view over the issue” Bommai said.
Keywords: Chief Minister Basavaraj Bommai/ Karnataka-Maharashtra/ border dispute/ SC hearing