ಒಂದೆಡೆ ಗಡಿ ವಿವಾದ: ಮೈಸೂರು ನಗರ ಸ್ವಚ್ಛತೆ ಬಗ್ಗೆ ಹಾಡಿಹೊಗಳಿದ ಕೊಲ್ಲಾಪುರ ಪುರಸಭಾ ಅಧ್ಯಕ್ಷೆ…

ಮೈಸೂರು,ಜನವರಿ,21,2021(www.justkannada.in): ರಾಜ್ಯದಲ್ಲಿ ಒಂದೆಡೆ ಗಡಿ ವಿವಾದ  ಉಂಟಾಗಿದ್ದರೇ ಇತ್ತ ಮೈಸೂರಿಗೆ ಆಗಮಿಸಿದ ಮಹಾರಾಷ್ಟ್ರದ ಕೊಲ್ಲಾಪುರ ಪುರಸಭಾ ಅಧ್ಯಕ್ಷೆ  ಸ್ವಾತಿ ಕೊರಿ ಮೈಸೂರು ನಗರದ ಸ್ವಚ್ಛತೆಯನ್ನ ಹಾಡಿಹೊಗಳಿದ್ದಾರೆ.

ಮೈಸೂರು ಹಾಗೂ ಕೊಲ್ಲಾಪುರ ಮುನ್ಸಿಪಾಲ್ಟಿಗಳ ಸಮನ್ವಯ. ಕೊಲ್ಲಾಪುರ ಪುರಸಭಾ ಅಧ್ಯಕ್ಷೆ ಸ್ವಾತಿ ಕೊರಿ ಹಾಗೂ ಮೇಯರ್ ತಸ್ನಿಂ ನಡುವೆ ಸ್ವಚ್ಛ ಸರ್ವೇಕ್ಷಣೆ  ಸಮಾಗಮ. ಮಹಾರಾಷ್ಟ್ರದ ಕೊಲ್ಲಾಪುರ ಪುರಸಭಾ ಸದಸ್ಯರ ತಂಡ ಎರಡು ದಿನಗಳ ಮೈಸೂರು ಪ್ರವಾಸ ಮಾಡುತ್ತಿದ್ದಾರೆ.

ದೇಶದೆಲ್ಲೆಡೆ ಸ್ವಚ್ಛತಾ ಅಭಿಯಾನ ಹಿನ್ನೆಲೆ. ಕೊಲ್ಲಾಪುರ ಪುರಸಭಾ ಸದಸ್ಯರು ಮೈಸೂರಿಗೆ ಆಗಮಿಸಿ ವಿವಿಧ ಕಡೆಗಳಲ್ಲಿ ಭೇಟಿ ನೀಡಿ ವೀಕ್ಷಣೆ ಮಾಡಿದರು.  ಘನತ್ಯಾಜ್ಯ ವಿಲೇವಾರಿ ಘಟಕ, ರಸ್ತೆಗಳು ಹಾಗೂ ಸ್ವಚ್ಛತಾ ವಿಚಾರವಾಗಿ ನಗರದೆಲ್ಲೆಡೆ ಸಂಚಾರ ಮಾಡಿದರು.

ಬಳಿಕ  ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಹಾಗೂ ಉಪಮೇಯರ್ ಶ್ರೀಧರ್  ಅವರನ್ನ ಕೊಲ್ಲಾಪುರ ತಂಡ ಭೇಟಿ ಮಾಡಿತು.   ಕೊಲ್ಲಾಪುರ ಪುರಸಭೆಯ 22 ಸ್ಥಾನಗಳ ಪೈಕಿ 15 ಮಂದಿ ಜೆಡಿಎಸ್ ಪಕ್ಷದಿಂದಲೇ ಸದಸ್ಯರು ಆಯ್ಕೆಯಾಗಿರುವ ವಿಶೇಷತೆಯನ್ನ ಮೇಯರ್ ತಸ್ನೀಂ ಅವರ ಜತೆ ಪುರಸಭಾ ಅಧ್ಯಕ್ಷೆ ಸ್ವಾತಿ ಕೊರಿ ಹಂಚಿಕೊಂಡರು.

Key words: border dispute- Kolhapur Municipal -Chairperson – Praise- Mysore City- clean