ವಿಜಯಪುರ,ಏಪ್ರಿಲ್,4,2024 (www.justkannada.in): ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ 2ವರ್ಷದ ಬಾಲಕ ಸಾತ್ವಿಕ್ ನನ್ನು ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ತಂಡ ನಿರಂತರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ. ಈ ಮೂಲಕ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದು ಇದೀಗ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾತ್ವಿಕ್ ನನ್ನು ಶಿಫ್ಟ್ ಮಾಡಲಾಗಿದೆ.
ನಿನ್ನೆ ಗ್ರಾಮದ ಶಂಕರಪ್ಪ ಮುಜಗೊಂಡ ಎನ್ನುವವರ ಜಮೀನಿನಲ್ಲಿ ಕೊಳವೆ ಬಾವಿಯಲ್ಲಿ ಎರಡು ವರ್ಷದ ಬಾಲಕ ಸಾತ್ವಿಕ್ ಸುಮಾರು 20 ಅಡಿ ಆಳದಲ್ಲಿ ಬಿದ್ದಿದ್ದ. ಬಳಿಕ ಕಾರ್ಯಾಪ್ರವೃತ್ತರಾ ಅಧಿಕಾರಿಗಳು ಎರಡು ಹಿಟಾಚಿ ಮೂರು ಜಿಸಿಬಿ ಗಳಿಂದ ಸಾತ್ವಿಕ್ ನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಲಾಗಿತ್ತು. ಅಲ್ಲದೆ ಎಸ್ ಡಿ ಆರ್ ಎಫ್ ತಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆ ನಡೆಸಿದೆ. ಇದೀಗ ಬಾಲಕ ಸಾತ್ವಿಕ್ ನನ್ನು ಜೀವಂತವಾಗಿ ಹೊರ ತೆಗೆಯಲಾಗಿದ್ದು ಸದ್ಯ ಪುಟ್ಟ ಮಗುವಿನ ಪ್ರಾಣ ಉಳಿದಿದ್ದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
Key words: boy, rescued, vijayapura