ಬಾಗಲಕೋಟೆ,ಮಾರ್ಚ್,31,2025 (www.justkannada.in): ನದಿಗೆ ಸ್ನಾನಕ್ಕೆಂದು ತೆರಳಿದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಲಿಯಾಳ ಗ್ರಾಮದಲ್ಲಿ ನಡೆದಿದೆ.
ಕೃಷ್ಣಾ ನದಿಯಲ್ಲಿ ಸ್ನಾನಕ್ಕೆಂದು ಸೋಮಶೇಖರ್ (15), ಪರನ ಗೌಡ ಮಲ್ಲಪ್ಪ ಬೀಳಗಿ (17) , ಮಲ್ಲಪ್ಪ ಬಸಪ್ಪ ಬಗಲಿ (15) ತೆರಳಿದ್ದರು. ಪಲ್ಲಕ್ಕಿ ದೇವರ ಉತ್ಸವ ವೇಳೆ ನದಿ ದಂಡೆಗೆ ಮೂವರು ಬಾಲಕರು ಬಂದಿದ್ದರು. ಈ ವೇಳೆ ಸ್ನಾನ ಮಾಡಲು ನದಿಗೆ ಇಳಿದಿದ್ದು ಮೂವರು ನಾಪತ್ತೆಯಾಗಿದ್ದಾರೆ.
ಓರ್ವ ಬಾಲಕ ಶವವಾಗಿ ಪತ್ತೆಯಾಗಿದ್ದು ಇನ್ನಿಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಬಾಲಕ ಸೋಮಶೇಖರ್ (15) ಶವ ಪತ್ತೆಯಾಗಿದ್ದಾನೆ ಅಗ್ನಿಶಾಮಕದಳ ಸಿಬ್ಬಂದಿ ಬಾಲಕರ ಶವ ಹುಡುಕಾಟದಲ್ಲಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Key words: Three boys, drowned, river, death