ಟಿವಿ, ಬೈಕ್ ಹೊಂದಿರುವವರಿಗೆ ಬಿಪಿಎಲ್ ಕಾರ್ಡು ರದ್ಧು ಹೇಳಿಕೆ: ಸ್ಪಷ್ಟನೆ ಕೇಳಿದಕ್ಕೆ ಮಾಧ್ಯಮಗಳ ಮೈಕ್ ಅನ್ನೇ ತಳ್ಳಿ ಗರಂ ಆದ ಆಹಾರ ಸಚಿವ ಉಮೇಶ್ ಕತ್ತಿ….

ಬೆಂಗಳೂರು,ಫೆಬ್ರವರಿ,15,2021(www.justkannada.in): ಮನೆಯಲ್ಲಿ ಬೈಕ್, ಟಿವಿ, ಫ್ರಿಡ್ಜ್  ಇದ್ಧರೆ ಬಿಪಿಎಲ್ ಕಾರ್ಡ್ ರದ್ಧು ಮಾಡ್ತಾರಂತೆ.  ಹೀಗೆ ನಿನ್ನೆ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದು ಈ ಬಗ್ಗೆ ಸ್ಪಷ್ಟನೆ ಕೇಳಲು ಹೋದ ಮಾಧ್ಯಮಗಳ ಮೇಲೆಯೆ ಹರಿಹಾಯ್ದು ಮೈಕ್ ತಳ್ಳಿ  ಅವಾಜ್ ಹಾಕಿರುವ ಘಟನೆ ನಡೆದಿದೆ.jk

ಹೌದು. ಮನೆಯಲ್ಲಿ ಬೈಕ್, ಟಿವಿ, ಫ್ರಿಡ್ಜ್  ಇದ್ಧರೆ ಬಿಪಿಎಲ್ ಕಾರ್ಡ್ ರದ್ಧು ಮಾಡುವುದಾಗಿ ನಿನ್ನೆ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು. ಮನೆಯಲ್ಲಿ ಬೈಕ್, ಟೆಲಿವಿಷನ್, ಫ್ರಿಡ್ಜ್ ಹೊಂದಿದ್ದವರ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು. ಇಂತಹ ಬಿಪಿಎಲ್ ಕಾರ್ಡುದಾರರು ತಮ್ಮ ಕಾರ್ಡ್‌ಗಳನ್ನು ಹಿಂದಿರುಗಿಸಲು ಮಾರ್ಚ್ ಅಂತ್ಯದವರೆಗೂ ಸಮಯ ನೀಡಲಾಗುತ್ತದೆ ಎಂದು ಹೇಳಿದ್ದರು.

ಸಚಿವ ಉಮೇಶ್ ಕತ್ತಿ ಹೇಳಿಕೆಗೆ ರಾಜ್ಯಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಪಿಎಲ್ ಕಾರ್ಡುದಾರರಿಗೆ ಹೊಸರೂಲ್ಸ್ , ಆಹಾರ ಇಲಾಖೆಯ ನಿಯಮಗಳ ಬಗ್ಗೆ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮಗಳ ವಿರುದ್ಧವೇ ಮೈಕ್ ತಳ್ಳಿ ಸಚಿವ ಉಮೇಶ್ ಕತ್ತಿ ಕಿಡಿಕಾರಿದ್ದಾರೆ.bpl-card-cancellation-statement-tv-bike-holders-minister-umesh-katti-media

ಈ ಮೂಲಕ ರಾಜ್ಯದ ಪಡಿತರವನ್ನ ನಂಬಿ ಜೀವನ ಸಾಗಿಸುತ್ತಿರುವ ಬಡ, ಮಧ್ಯಮ ವರ್ಗದ ಜನರಿಗೆ ಶಾಕ್ ನೀಡಲು ಸರ್ಕಾರ ಮುಂದಾಗಿದ್ದು, ಒಂದು ವೇಳೆ ನಿಯಮಗಳು ಜಾರಿಯಾದರೇ ಸರ್ಕಾರದ ವಿರುದ್ಧವೇ ಜನರು ತಿರುಗಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸಚಿವರ ಹೇಳಿಕೆ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ENGLISH SUMMARY…

Minister Umesh Katti exhibits anger on media persons
Bengaluru, Feb. 15, 2021 (www.justkannada.in): Food and Civil Supplies Minister Umesh Katti had informed that BPL cards of people who own bike, TV, refrigerator at home will be cancelled. When the media persons went to question him about this yesterday he pushed the microphone and shouted at them.
The incident took place yesterday. The Minister had informed that illegal BPL cards will be cancelled. BPL cards of those who own a bike, TV and fridge will be cancelled he had informed, for which many had expressed their ire. When the media men approached him to question about the new rules for BPL card holders he exhibited his anger by pushing away the microphone.bpl-card-cancellation-statement-tv-bike-holders-minister-umesh-katti-media
People who are dependent upon PDS will face lot of problems because of the new rules and the State government will have to face the ire of the people if it goes ahead with this rule.
Keywords: Minister Umesh Katti/ exhibits anger/ media persons/ BPL card holders/

Key words: BPL Card- Cancellation -Statement -TV – Bike Holders- minister- umesh katti-Media