ಬೆಂಗಳೂರು,ನವೆಂಬರ್,20,2024 (www.justkannada.in): ಬಡವರ ಬಳಿ ಇರುವ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸ್ಪಷ್ಟನೆ ನೀಡಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಅತಿಹೆ ಚ್ಚು ರೇಷನ್ ಕಾರ್ಡ್ ಗಳು ಇರೋದು ನಮ್ಮ ರಾಜ್ಯದಲ್ಲಿಯೇ. ಬೇರೆ ರಾಜ್ಯದಲ್ಲಿ 40% ಕಾರ್ಡ್ ಇದ್ದರೆ ಇಲ್ಲಿ ಶೇ 80ರಷ್ಟು ಬಿಪಿಎಲ್ ಕಾರ್ಡ್ ಗಳಿವೆ. ಯಾರು ತೆರಿಗೆ ಕಟ್ಟುತ್ತಾರೆಯೇ ಅಂತವರ ರೇಷನ್ ಕಾರ್ಡ್ ಕಟ್ ಆಗುತ್ತದೆ ಬಡವರ ರೇಷನ್ ಕಾರ್ಡ್ ರದ್ದಾಗಲ್ಲ.
ನನ್ನನ್ನೇ ಉದಹಾರಣೆ ತೆಗೆದುಕೊಳ್ಳಿ ನಾನು ತೆರಿಗೆ ಕಟ್ಟುತ್ತೇನೆ. ನನ್ನ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಅನರ್ಹ ಆಗಬೇಕಲ್ವಾ? ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
Key words: BPL cards, poor, not, cancelled, Minister, M.B. Patil