ಬೆಂಗಳೂರು, ಏಪ್ರಿಲ್ 30, 2023 (www.justkannada.in): ಲಿಂಗಾಯತರ ಸಿಎಂ ಚರ್ಚೆಗೆ ಬ್ರೇಕ್ ಹಾಕುವಂತೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಬಿಎಸ್ವೈ ಮನೆಯಲ್ಲಿ ಸಭೆ ಸೇರಿದ್ದ ಲಿಂಗಾಯತ ನಾಯಕರು ಆಡಿದ್ದ ಮಾತಿಗಳು ಮರುಕಳಿಸದಂತೆ ಬ್ರೇಕ್ ಹಾಕಿದ್ದಾರೆ.
ಲಿಂಗಾಯತ ಸಮುದಾಯಕ್ಕಷ್ಟೇ ಸಿಎಂ ಸ್ಥಾನ ಸೀಮಿತ ಎಂಬ ಸಂದೇಶ ರವಾನೆಯಾದ್ರೆ, ಪಕ್ಷದಿಂದ ಹಿಂದುಳಿದ ದಲಿತ ವರ್ಷಗಳು ಮತ್ತಷ್ಟು ದೂರವಾಗಲಿದೆ ಎಂಬ ಎಚ್ಚರಿಕೆಯನ್ನು ಶಾ ನೀಡಿದ್ದಾರೆ.
ಜಗದೀಶ್ ಶೆಟ್ಟರ್, ಸವದಿ ಕಾಂಗ್ರೆಸ್ನತ್ತ ಸರಿದ ಬಳಿಕ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿದೆ. ಪ್ರತಿ ದಿನ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ಅತಿರಥ ನಾಯಕರಿಗೆ ಆತಿಥ್ಯ ನೀಡಿದೆ.. ಈ ಬೆನ್ನಲ್ಲೆ, ಲಿಂಗಾಯತ ಸಿಎಂ ದಾಳಕ್ಕೆ ಚಾಲನೆ ಸಿಕ್ಕಿದೆ.