ನವದೆಹಲಿ,ಡಿಸೆಂಬರ್, 31,2020(www.justkannada.in): ದೇಶದಲ್ಲಿ ಹೊಸ ಕೊರೋನಾ ರೂಪಾಂತರ ಪತ್ತೆಯಾಗಿದ್ದು ಈ ಹಿನ್ನೆಲೆ ಹೊಸ ವರ್ಷಾಚರಣೆಗೆ ಈ ಬಾರಿ ಬ್ರೇಕ್ ಬಿದ್ದಿದೆ. ಈ ನಡುವೆ ಕೊರೋನಾ ಹರಡದಂತೆ ತಡೆಯಲು ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಎರಡು ದಿನಗಙಳ ಕಾಲ ನೈಟ್ ಕರ್ಫ್ಯೂ ಜಾರಿಗೆ ನಿರ್ಧಾರ ಮಾಡಲಾಗಿದೆ.
ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಕಡಿವಾಣ ಹಾಕಲು ಮತ್ತು ಹೊಸ ವರ್ಷಾಚರಣೆ ವೇಳೆ ಕರೋನವೈರಸ್ ಹರಡದಂತೆ ತಡೆಯಲು ಡಿಸೆಂಬರ್ 31 ಮತ್ತು ಜನವರಿ 1ರಂದು ರಾಷ್ಟ್ರ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ ಹೇರಲಾಗುವುದು ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
‘ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೆ ಹಾಗೂ ಜನವರಿ 1ರ ಬೆಳಗ್ಗೆ 11 ರಿಂದ ಜನವರಿ 2ರ ಬೆಳಗ್ಗೆ 6 ಗಂಟೆಯವರೆಗೆ ದೆಹಲಿಯ ಜಿಎನ್ ಸಿಟಿಯಲ್ಲಿ ಯಾವುದೇ ಹೊಸ ವರ್ಷಾಚರಣೆ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸಮಾರಂಭ, ಸಭೆ ಸಮಾರಂಭಗಳಿಗೆ ಅನುಮತಿ ನೀಡಲಾಗುವುದಿಲ್ಲ’ ಎಂದು ಪ್ರಾಧಿಕಾರ ತಿಳಿಸಿದೆ.
Key words: Break – New Year-Night curfew – two days – Delhi.