ಮೈಸೂರು,ಜನವರಿ,20,2021(www.justkannada.in): ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡುವಂತೆ ನಡೆಯುತ್ತಿರುವ ಹೋರಾಟದ ಬಗ್ಗೆ ಇನ್ನೊಂದು ಮಾತಾಡಿದ್ರೂ ಸಿದ್ದರಾಮಯ್ಯ ನನ್ನು ಸಮುದಾಯದಿಂದ ಬಹಿಷ್ಕಾರ ಮಾಡಬೇಕಾಗುತ್ತೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.
ಕುರುಬ ಎಸ್ಟಿ ಹೋರಾಟ ಬೃಹತ್ ಸಮಾವೇಶ ಕುರಿತು ಪೂರ್ವಭಾವಿ ಸಭೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ನೇತೃತ್ವದಲ್ಲಿ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಮಾವೇಶದ ರೂಪುರೇಷೆ ಕುರಿತು ಚರ್ಚೆ ನಡೆಸಲಾಯಿತು.
ಕುರುಬ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ವಿರೂಪಾಕ್ಷ, ಮಾಜಿ ಸಂಸದ ವಿಜಯ್ ಶಂಕರ್ ಹಾಗೂ ಕುರುಬ ಸಮುದಾಯದ ಜಿಲ್ಲಾ ಮುಖಂಡರು ತಾಲೂಕು ಪದಾಧಿಕಾರಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಫೆಬ್ರವರಿ.7ರಂದು ನಡೆಯುವ ಸಮಾವೇಶಕ್ಕೆ ಸುಮಾರು 10ಲಕ್ಷ ಜನ ಸೇರಿಸಬೇಕು.ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ರೆ ಮಾತ್ರ ಅದು ಸಾಧ್ಯ. ಈ ವಿಚಾರದಲ್ಲಿ ಸಮುದಾಯ ಸಂಘಟನೆ ಬಹಳ ಮುಖ್ಯ. ಈಶ್ವರಪ್ಪ ಮಂತ್ರಿಯಾಗಿದ್ರೂ ಸಹ ಹೊರಬಂದು ಹೋರಾಟಕ್ಕೆ ಬೆಂಬಲ ಕೊಡ್ತಿದ್ದಾರೆ. ಸಮುದಾಯದ ಎಲ್ಲಾ ನಾಯಕರು ಒಗ್ಗಟ್ಟಾಗಿ ಹೋರಾಟ ಮಾಡಿದ್ರೆ ಮಾತ್ರ ಯಶಸ್ಸು ಸಾಧ್ಯ ಎಂದರು.
ಹೋರಾಟ ಮಾಡಿ ಮಠ ಮಾಡಿದ್ದು ನಾನು.
ಕುರುಬ ಮಠ ಕಟ್ಟುವಾಗ ಯಾರೂ ಬಂದಿರ್ಲಿಲ್ಲ. ಸಿದ್ದರಾಮಯ್ಯನೂ ಇಲ್ಲ, ಈಶ್ವರಪ್ಪನೂ ಬರಲಿಲ್ಲ. ಹೋರಾಟ ಮಾಡಿ ಮಠ ಮಾಡಿದ್ದು ನಾನು. ಸಿದ್ದರಾಮಯ್ಯ ವಿಶ್ವನಾಥ್ ನೇ ಕಾವಿ ಹಾಕಿಕೊಳ್ತಾನಾ ಅಂತ ಬೈದಿದ್ರು. ಈ ಹೋರಾಟಕ್ಕೂ ಅಷ್ಟೇ ಸಾಧ್ಯವಾದ್ರೆ ಬನ್ನಿ ಇಲ್ಲ ಮನೆಯಲ್ಲಿರಿ ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.
ಸಿದ್ದರಾಮಯ್ಯ ನನ್ನು ಸಮುದಾಯದಿಂದ ಬಹಿಷ್ಕಾರ ಮಾಡಬೇಕಾಗುತ್ತೆ. ಹೋರಾಟದ ಬಗ್ಗೆ ಇನ್ನೊಂದು ಮಾತಾಡಿದ್ರೂ ಸಮುದಾಯದಿಂದ ಬಹಿಷ್ಕಾರ ಮಾಡಬೇಕಾಗುತ್ತದೆ. ನಮ್ಮ ಸಮುದಾಯದ ಗುರುಗಳು ನಮಗೆ ದೇವರ ಸಮಾನ. ಸಮುದಾಯದ ಉದ್ದಾರಕ್ಕಾಗಿ ಕಾಲ್ನಡಿಗೆ ಹೋರಾಟ ಮಾಡುತ್ತಿದ್ದಾರೆ. ನಿಮ್ಮ ತುಚ್ಛ ಹೇಳಿಕೆಗಳ ಮೂಲಕ ಅವರನ್ನು ಅವಮಾನ ಮಾಡಿದ್ರೆ ಸಹಿಸಲ್ಲ. ದುಡ್ಡು ತಕೊಂಡು ಚಳುವಳಿ ಮಾಡ್ತಿದ್ದಾರೆ ಅನ್ನೊ ನಿಮ್ಮ ಹೇಳಿಕೆ ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಹುಷಾರ್, ಇನ್ನೂಂದು ಹೇಳಿಕೆ ನೀಡಿದ್ರೆ ಜಾತಿಯಿಂದ ಬಹಿಷ್ಕರಿಸುತ್ತೇವೆ. ಕುರುಬರನ್ನು ಒಡೆಯುತ್ತಿರುವುದು ಆರ್.ಎಸ್ಎಸ್ ಅಲ್ಲ ಸಿದ್ದರಾಮಯ್ಯ. ಇದು ಇಡೀ ಸಮಾಜಕ್ಕೆ ಮಾಡುತ್ತಿರುವ ಅವಮಾನ. ಸಿದ್ದರಾಮಯ್ಯ ನವರು ಸಮುದಾಯದವರಿಗೆ ಅವಮಾನ ಮಾಡ್ತಿದ್ದಾರೆ. ತನು, ಮನ, ಧನ ಅರ್ಪಿಸಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪೂರ್ವಭಾವಿ ಸಭೆಯಲ್ಲಿ ಸಿದ್ಧರಾಮಯ್ಯ ವಿರುದ್ಧ ವಿಶ್ವನಾಥ್ ಕಿಡಿ ಕಾರಿದರು.
Key words: Breaking down – shepherds community – Siddaramaiah-MLC-H. Vishwanath