ನಳಿನಿಯ ಪರವಾಗಿ ಮೈಸೂರು ನ್ಯಾಯಾಲಯಕ್ಕೆ ಸಲ್ಲಿಸಲಾದ ವಕಾಲತ್ತೇ ನಕಲಿ..!

 

ಮೈಸೂರು, ಜ.21, 2020 : (www.justkannada.in news) : ಫ್ರೀ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮೈಸೂರಿನ ವಕೀಲರ ಸಂಘದ ಸದಸ್ಯರು ಆರೋಪಿ ನಳಿನಾ ಪರಾವಾಗಿ ವಕಾಲತ್ತು ವಹಿಸದಿರಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಆಕೆಯ ಪರವಾಗಿ ವಕಾಲತ್ತು ವಹಿಸಲು ಮಂಡ್ಯ,ಬೆಂಗಳೂರು, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ,ಸೇರಿದಂತೆ ವಿವಿದ ನಗರಗಳಿಂದ ಸೋಮವಾರ ಮೈಸೂರಿನ ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲರು ನಳಿನಾ ಪರ ವಕಾಲತ್ತು ವಹಿಸಿ ಹಿರಿಯ ವಕೀಲ ದ್ವಾರಕಾನಾಥ್ ಸೇರಿದಂತೆ 165 ವಕೀಲರ ಸಹಿ ಇರುವ ವಕಾಲತ್ತನ್ನು ನ್ಯಾಯಾಲಯಕ್ಕೆ ಸಲ್ಲಿದ್ದಾರೆಂದು ಸುದ್ದಿಯಾಗಿದೆ.
ಈ ವಕಾಲತ್ತಿಗೆ ಮೈಸೂರಿನ ನೂರಾರು ವಕೀಲರೂ ಸಹಿ ಮಾಡಿದ್ದಾರೆಂದೂ ವರದಿಯಾಗಿದೆ.
ಕೂಲಂಕುಷವಾಗಿ ಪರಿಶೀಲಿಸಿ ನೋಡಿದಾಗ ನಳಿನಿಯ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾದ ವಕಾಲತ್ತೇ ನಕಲಿ!
ನ್ಯಾಯಾಲಯಕ್ಕೆ ಸಲ್ಲಿಸಲಾದ ವಕಾಲತ್ತಿನಲ್ಲಿ ಇರುವ ಸಹಿಗಳು ನಳಿನಾ ಪರವಾಗಿ ಮಾಡಿದ ಸಹಿಗಳಲ್ಲ.
ಮೈಸೂರಿನ ವಕೀಲರು ನಳಿನಾ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂದು ಕೈಗೊಂಡ ತೀರ್ಮಾನದ ವಿಚಾರವಾಗಿ ಚರ್ಚೆ ನಡೆಯಬೇಕೆಂಬ ಉದ್ದೇಶದಿಂದ ಸರ್ವ ಸದಸ್ಯರ ಸಭೆಯನ್ನು ಕರೆಯಬೇಕೆಂದು ‘ವೃತ್ತಿ ತೊರೆದ’ ಕೆಲವು ವಕೀಲರು ಅರ್ಜಿ ಬರೆದು ತಂದು ಸದರಿ ಅರ್ಜಿಯ ಹಿಂಭಾಗದಲ್ಲಿ ವಕಾಲತ್ ಮತ್ತು ಖಾಲಿ ಹಾಳೆಗಳಿಗೆ ವಕೀಲರ ಸಹಿ ಪಡೆದು ಆ ಹಾಳೆಗಳನ್ನು ದುರುಪಯೋಗ ಪಡಿಸಿಕೊಂಡು ವಕಾಲತ್ತಿಗೆ ಲಗತ್ತಿಸಿ ನಳಿನಿಯ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಾಲಯವನ್ನೇ ವಂಚಿಸಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.
ಸರ್ವಸದಸ್ಯರ ಸಭೆ ಕರೆದು ಚರ್ಚೆ ನಡೆಯುವುದಕ್ಕೆಂದು ಅರ್ಜಿಗೆ ಸಹಿ ಮಾಡಿದ ವಕೀಲರು ಮೋಸಹೋಗಿರುವುದಂತೂ ನಿಜ.
ಸಭೆ ಕರೆಯಲು ತಮ್ಮ ಸಹಿಗಳನ್ನು ಪಡೆದು ಅದನ್ನು ದುರುಪಯೋಗ ಪಡಿಸಿಕೊಂಡು ವಕಾಲತ್ತಿಗೆ ಲಗತ್ತಿಸಿ, ನ್ಯಾಯಾಲಯಕ್ಕೆ ಸಲ್ಲಿಸಿ ವಕೀಲರು ಮತ್ತು ನ್ಯಾಯಾಲಯವನ್ನು ವಂಚಿಸಿದ ಸ್ವಯಂ ಘೋಷಿತ ಪ್ರಗತಿಪರ(!) ವಕೀಲರ ವಿರುದ್ಧ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕ್ರಮ ಕೈಗೊಳ್ಳಬೇಕಾಗಿದೆ.
ತಮ್ಮ ಸಹಿಗಳನ್ನು ದುರುಪಯೋಗ ಪಡಿಸಿಕೊಂಡು ವಕಾಲತ್ತಿಗೆ ಅವುಗಳನ್ನು ಲಗತ್ತಿಸಿ ನಳಿನಿಯ ಪರವಾಗಿ ವಕಾಲತ್ ಸಲ್ಲಿಸಿದುದು ಮನವರಿಕೆಯಾದೊಡನೆ ಅಂತಹ ವಕೀಲರು ತಮ್ಮ ವಕಾಲತ್ತು ಹಿಂಪಡೆದು ಪ್ರಕರಣದಿಂದ ನಿವೃತ್ತಿ ಹೊಂದಲು ತೀರ್ಮಾನಿಸಿದ್ದಾರೆ.
ವಕೀಲರ ಸಹಿಗಳನ್ನು ದುರುಪಯೋಗ ಪಡಿಸಿಕೊಂಡು ನ್ಯಾಯಾಲಯವನ್ನು ಹಾಗೂ ಮೈಸೂರಿನ ವಕೀಲರನ್ನೇ ವಂಚಿಸಿದ ಸ್ವಯಂ ಘೋಷಿತ ಪ್ರಗತಿಪರ ವಕೀಲರ ತಲೆಯ ಮೇಲೆ ನ್ಯಾಯಾಂಗ ನಿಂದನೆಯ ತೂಗುಗತ್ತಿ ತೂಗಾಡತೊಡಗಿದೆ.

Mysore court-  filed on behalf of-  Nalini - is fake. The signatures - advocacy -court - not the signatures - on behalf of Nalini.

-ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು

key words : Mysore court-  filed on behalf of-  Nalini – is fake. The signatures – advocacy -court – not the signatures – on behalf of Nalini.