ಬೆಂಗಳೂರು, ಆ.09, 2019 : (www.justkannada.in news) ಮಂಸೋರೆ ನಿರ್ದೇಶನ, ಸಂಧ್ಯಾರಾಣಿಯವರ ಕಥೆಯನ್ನುಳ್ಳ ‘ನಾತಿ ಚರಾಮಿ’ 5 ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಮಂಸೋರೆಗೆ ಇದು ಎರಡನೆಯ ರಾಷ್ಟ್ರ ಪ್ರಶಸ್ತಿ. ‘ಹರಿವು’ ಇವರಿಗೆ ಮೊದಲು ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಿತ್ರ
ಅತ್ಯುತ್ತಮ ಕನ್ನಡ ಪ್ರಶಸ್ತಿಗೆ ಈ ಬಾರಿ ನಾತಿ ಚರಾಮಿ ಪಾತ್ರವಾಗಿರುವುದಲ್ಲದೆ ಅತ್ಯುತ್ತಮ ಸಂಕಲನ, ಹಾಡು, ಗಾಯನ ಹಾಗೂ ನಟನೆಗೆ ಪ್ರಶಸ್ತಿ ಗಳಿಸಿದೆ.
ಶ್ರುತಿ ಹರಿಹರನ್ ಅವರ ಅಭಿನಯ ತೀರ್ಪುಗಾರರ ಮಂಡಳಿಯ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ನಾಗೇಂದ್ರ ಕೆ ಉಜ್ಜನಿ ಸಂಕಲನ, ಮಂಸೋರೆ ಅವರ ಹಾಡು, ಬಿಂದು ಮಾಲಿನಿ ಗಾಯನ ಪ್ರಶಸ್ತಿ ಗಳಿಸಿವೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ :
ಈರೇಗೌಡ ನಿರ್ದೇಶಿಸಿರುವ, ಎನ್ ಆರ್ ವಿಶುಕುಮಾರ್ ಹಾಗೂ ಎಚ್ ಆರ್ ಸುಜಾತ ಅವರ ನಿರ್ಮಾಣದ ‘ಸರಳ ವಿರಳ’ ಅತ್ಯುತ್ತಮ ಶೈಕ್ಷಣಿಕ ಸಾಕ್ಷ್ಯ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಸಹಜ ಕೃಷಿಕ ನಾರಾಯಣರೆಡ್ಡಿ ಅವರ ಬದುಕಿನ ಕಥನ ಇದು.
ಕೃಪೆ : ಅವಧಿ
key words : nathicharami-kannaa-film-national-award-winner