ಮೈಸೂರು, ಆ.02, 2022 : (www.justkannada.in news) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿದ್ಯಾಶಂಕರ್ ಹಾಗೂ ಅವರ ಆಪ್ತ ಸಹಾಯಕ ದೇವರಾಜು ವಿರುದ್ಧ ಹಲ್ಲೆ ಆರೋಪ.
ಮುಕ್ತ ವಿವಿಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಪ್ರದೀಪ್ ಗಿರಿ ಮೇಲೆ ಹಲ್ಲೆ ನಡೆಸಿದ ಆರೋಪ.
ಕೆ ಎಸ್ ಓ ಯುವಿನಲ್ಲಿ ಪರೀಕ್ಷಾಂಗ ಭವನದ ಕೊಠಡಿಯಲ್ಲಿ ಇಂದು ಮಧ್ಯಾಹ್ನ ಹಲ್ಲೆ ನಡೆಸಿದ ಆರೋಪ. ತಡವಾಗಿ ಕಚೇರಿಗೆ ಬಂದಿದ್ದಕ್ಕೆ ಇವರ ನಡುವೆ ನಡೆದ ಮಾತಿನ ಚಕಮಕಿ. ನಂತರ ಕೊಠಡಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ ಆರೋಪ.
ಸಹಾಯಕ ಕುಲಸಚಿವ ಪ್ರದೀಪ್ ಗಿರಿ ಅವರ ಮುಖ ಹಾಗೂ ಕಿವಿಗೆ ಗಾಯ. ಘಟನೆ ಬಳಿಕ ಹಲ್ಲೆಗೊಳಗಾದ ಪ್ರದೀಪ್ ಗಿರಿ, ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು. ಈ ವೇಳೆ ದೂರುದಾರ ಪ್ರದೀಪ್ ಗಿರಿ ಅವರನ್ನು ಚಿಕಿತ್ಸೆ ಹಾಗೂ ವೈದ್ಯಕೀಯ ಪರೀಕ್ಷೆಗೆಂದು ಕೆ.ಆರ್ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.
ಜಯಲಕ್ಷ್ಮಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.
key words : KSOU-VC-assaulted-assistant-registrar-police-complaint