ಮೈಸೂರು,ಏಪ್ರಿಲ್,7,2025 (www.justkannada.in): ಕ್ಷುಲ್ಲಕ ಕಾರಣಕ್ಕೆ ಅಣ್ಣ- ಅತ್ತಿಗೆ ಮೇಲೆ ತಮ್ಮನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಲಕ್ಕಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಕಾಮಾಕ್ಷಮ್ಮ ಹಾಗೂ ಶ್ರೀಕಂಠೇಗೌಡ ಹಲ್ಲೆಗೊಳಗಾದ ದಂಪತಿ. ಸಹೋದರ ದಶರಥ, ಪುತ್ರ ಶಂಕರೇಗೌಡ ಆಲಿಯಾಸ್ ವಿದ್ಯಾ, ಸಂಬಂಧಿ ಹಂಡ್ರಂಗಿ ಗ್ರಾಮದ ಸಂದೀಪ್ ಎಂಬುವವರೇ ಹಲ್ಲೆ ನಡೆಸಿರುವವರು.
ತನ್ನ ಭಾಗದಲ್ಲಿರೋ ಮರ ತೆರವು ಮಾಡಲು ತಮ್ಮ ದಶರಥ ತಡೆಯೊಡ್ಡಿದ್ದ.ಮರ ಮನೆ ಮೇಲೆ ಬೀಳುತ್ತದೆ ತೆರವು ಮಾಡಬೇಕು ಎಂದು ಶ್ರೀಕಂಠೇಗೌಡ ಕೇಳಿಕೊಂಡರೂ ಸಹ ತಮ್ಮ ದಶರಥ ತಡೆಯೊಡ್ಡಿದ್ದರು. ಬಳಿಕ ಹಲ್ಲೆಗೊಳಗಾದ ಶ್ರೀಕಂಠೇಗೌಡ ಸಹೋದರ ದಶರಥ ಗೋಡೆ ಪ್ಲಾಸ್ಟರಿಂಗ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಪ್ಲಾಸ್ಟಿಂಗ್ ಗೆ ಅಣ್ಣ ಶ್ರೀಕಂಠೇಗೌಡ ತಡೆಯೊಡ್ಡಿದ್ದು, ಇದರಿಂದ ಕೋಪಗೊಂಡು ಕಾಮಾಕ್ಷಮ್ಮ ಹಾಗು ಶ್ರೀಕಂಠೇಗೌಡ ದಂಪತಿ ಮೇಲೆ ದಶರಥ ಮತ್ತು ಪುತ್ರ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮೊದಲು ಮರ ತೆರವು ಮಾಡಲು ಬಿಡು ಆಮೇಲೆ ಪ್ಲಾಸ್ಟರಿಂಗ್ ಮಾಡಿಕೊ ಎಂದಿದ್ದಕ್ಕೆ ಸಹೋದರ ಧಶರಥ ಮತ್ತು ಸಂಬಂಧಿಗಳು ಕಾಮಾಕ್ಷಮ್ಮ ಹಾಗೂ ಶ್ರೀಕಂಠೇಗೌಡ ಹಲ್ಲೆ ನಡೆಸಿದ್ದಾರೆ. ಮಚ್ಚು, ರಾಡು, ಕಟ್ಟಿಗೆಯಿಂದ ಮನಬಂದಂತೆ ಆರೋಪಿಗಳು ಹಲ್ಲೆ ಮಾಡಿದ್ದು ಗಾಯಾಳುಗಳಿಗೆ ಸಾಲಿಗ್ರಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Key words: Mysore, Brother, fatally, assaulted