ಬೆಂಗಳೂರು,ಜು,20,2019(www.justkannada.in): ಸೋಮವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಹಿನ್ನೆಲೆ ರೆಸಾರ್ಟ್ ನಲ್ಲೇ ಇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಬಿಜೆಪಿ ಶಾಸಕರಿಗೆ ಕರೆ ಮಾಡಿರುವ ಬಿಎಸ್ ಯಡಿಯೂರಪ್ಪ ಇಂದು ರೆಸಾರ್ಟ್ ನಲ್ಲೇ ಇರುವಂತೆ ಸೂಚಿಸಿದ್ದಾರೆ. ಹಾಗೆಯೇ ರೆಸಾರ್ಟ್ ನಿಂದ ಹೊರ ಹೋಗಿರುವವರು ಮತ್ತೆ ವಾಪಸ್ ಆಗುವಂತೆ ಸೂಚನೆ ನೀಡಿದ್ದಾರೆ. ಇನ್ನು ಬಿಎಸ್ ವೈ ಇಂದು ಶಾಸಕರ ಜತೆ ರೆಸಾರ್ಟ್ ನಲ್ಲೇ ಕಾಲ ಕಳೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಗುರುವಾರ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಪ್ರಸ್ತಾವ ಮಂಡಿಸಿದ್ದರು. ಆದರೆ ಎರಡು ದಿನ ವಿಶ್ವಾಸಮತಯಾಚನೆ ಪ್ರಸ್ತಾವದ ಮೇಲೆ ಚರ್ಚೆಯಾಗಿದ್ದು ಸೋಮವಾರಕ್ಕೆ ಕಲಾಪ ಮುಂದೂಡಲ್ಪಟ್ಟಿದೆ. ಹೀಗಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ನಾಳೆಯೇ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ.
Key words: BS Yeddyurappa- instructs- BJP MLAs -stay – resort