ಮುಂಬೈ, ಆಗಸ್ಟ್ 13, 2021 (www.justkannada.in): ಶುಕ್ರವಾರದಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ೫೫,೦೦೦ ಗಡಿ ದಾಟುವುದರೊಂದಿಗೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಶೇರು ಮಾರುಕಟ್ಟೆ ಹೊಸ ದಾಖಲೆ ನಿರ್ಮಿಸಿದೆ.
ಜನವರಿ ೨೧, ೨೦೨೧ರಂದು ಅಮೇರಿಕದ ಅಧ್ಯಕ್ಷ ಜೋ ಬಿಡೆನ್ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಎಸ್ ಇ ೫೦,೦೦೦ರ ಗಡಿ ದಾಟಿತ್ತು. ಸುಮಾರು ಆರು ತಿಂಗಳ ನಂತರ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ ೫೫,೧೯೯.೪೨ ಅನ್ನು ತಲುಪಿದೆ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ ನ ನಿಫ್ಟಿ ೫೦ ಆಗಸ್ಟ್ ೧೩,೨೦೨೧ರಂದು ೧೬,೪೬೮.೪೫ರ ದಾಖಲೆ ಸಂಖ್ಯೆಯನ್ನು ತಲುಪಿದೆ.
ಶುಕ್ರವಾರ ಬೆಳಿಗೆ ೧೧.೧೦ರ ಸುಮಾರಿಗೆ ಸೆನ್ಸೆಕ್ಸ್ ೫೫,೧೯೬.೮೦ರಷ್ಟಿತ್ತು. ೫೪,೮೪೩.೯೮ರೊಂದಿಗೆ ಮುಕ್ತಾಯಗೊಂಡಿದ್ದ ಸೆನ್ಸೆಕ್ಸ್ ೩೫೨.೮೨ ಅಂಕಗಳೊAದಿಗೆ ೦.೬೪ರಷ್ಟು ಏರಿಕೆಯನ್ನು ದಾಖಲಿಸಿತು.
Keywords: BSE- Nifty50- National Stock Exchange- record high