ಬೆಂಗಳೂರು,ಫೆಬ್ರವರಿ,14,2021(www.justkannada.in) : ಬಿಜೆಪಿ ಸರ್ಕಾರ ಪೂರ್ಣಗೊಳ್ಳುವವರೆಗೂ ಬಿಎಸ್ವೈ ಅವರ ನೇತೃತ್ವದಲ್ಲೇ ಸರ್ಕಾರ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಾಪುರ ವಿಮಾನ ನಿಲ್ದಾಣ ನನ್ನ ಮನಸ್ಸಿಗೆ ತಕ್ಕ ಹಾಗೆ ಆಗಿಲ್ಲ. ಮುಳವಾಡ ಬಳಿ ವಿಮಾನ ನಿಲ್ದಾಣ ಆಗಬೇಕೆಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಕೆಲವರು ಅಲ್ಲಿ ನನ್ನ ಹೊಲ ಇದ್ದು, ಅದರ ದರ ಹೆಚ್ಚಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎಂಬ ಟೀಕೆ ಮಾಡಿದ್ದರಿಂದ ನಾನು ಸುಮ್ಮನಾದೆ ಎಂದಿದ್ದಾರೆ.
ಭವಿಷ್ಯದಲ್ಲಿ ಆ ಜಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲಿದೆ ಎಂಬುದು ಗಮನಿಸಬೇಕಾದ ಅಂಶ. ಮುಳವಾಡ ಬಳಿ 2500 ಎಕರೆ ಸರ್ಕಾರದ ಜಾಗವಿದೆ. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಅಲ್ಲಿ ಕಲ್ಪಿಸಬಹುದಾಗಿತ್ತು ಎಂದು ವಿವರಿಸಿದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ
ಜಿಲ್ಲೆ ತೋಟಗಾರಿಕೆಗೆ ಹೆಸರಾಗಿದೆ. ಔದ್ಯೋಗಿಕ ಬೆಳವಣಿಗೆಗೆ ಅನುಕೂಲವಾಗುವಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದರೆ ಸಮರ್ಪಕವಾಗಿ ನೀರು ಸಹ ಸಿಗಲಿದೆ. ಅದಕ್ಕೆ ನಮ್ಮದೂ ಒತ್ತಾಯವಿದೆ. ನೀರಾವರಿ ಸಮೃದ್ಧವಾಗಿದ್ದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
key words : BSY-Led-Government-Will-held-DCM-Govinda Karajola