ಮೈಸೂರು,ಮೇ,16,2022(www.justkannada.in): ಜಗತ್ತಿನಲ್ಲಿ ಇಂದು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಬುದ್ಧನ ಚಿಂತನೆ ಪರಿಹಾರ ಒದಗಿಸುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ ಮತ್ತು ಸಮಾನತೆ ಸ್ವಾಭಿಮಾನ-ಸ್ವಾವಲಂಬನೆ ಪ್ರತಿಷ್ಠಾನ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ 2566ನೇ ಬುದ್ಧ ಪೂರ್ಣಿಮೆ ಪ್ರಯುಕ್ತ ಸಮಕಾಲೀನ ಜಗತ್ತಿಗೆ ಬುದ್ಧನ ಚಿಂತನೆಗಳು ಎಂಬ ವಿಷಯದ ಬಗ್ಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಮಾಜದಲ್ಲಿ ನಾವು ಯಾವ ರೀತಿ ಬದುಕಬೇಕೆಂಬುದನ್ನು ಬುದ್ಧ ಮಾರ್ಗ ತಿಳಿಸಿಕೊಡುತ್ತದೆ. ಬುದ್ಧ ಜಗತ್ತಿಗೆ ಬೆಳಕು. ಈ ಬಾರಿ ಬುದ್ಧಪೂರ್ಣಿಮೆ ಆಚರಿಸಲು ಎರಡು ವಿಶೇಷ ಕಾರಣ ಇದೆ. ಮೊದಲನೆಯದು ಮೈವಿವಿಯಲ್ಲಿ ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆ ಆಗುತ್ತಿರುವುದು. ಮತ್ತೊಂದು ಶ್ರೀನಿವಾಸ ಪ್ರಸಾದ್ ಅವರ ಪ್ರತಿಷ್ಠಾನದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿರುವುದು. ಬುದ್ಧ ಶಾಂತಿ ಎಲ್ಲೆಡೆ ಪಸರಿಸಬೇಕಿದೆ ಎಂದರು.
ಮಾನವ ತಲ್ಲಣಗಳಿಗೆ ಬುದ್ಧ ಗುರುವಿನ ಚಿಂತನೆಗಳು ಪರಿಹಾರ ಸೂಚಿಸುತ್ತದೆ. ಆದರೆ, ಮಾನವ ಬುದ್ಧಗುರುವಿನ ಚಿಂತನೆಗಳಿಂದ ದೂರ ಉಳಿದಿದ್ದಾನೆ. ಇದರಿಂದ ಅನೇಕ ಸಮಸ್ಯೆಗಳು ಅವನನ್ನು ಕಾಡುತ್ತಿದೆ. ಬುದ್ಧನ ಚಿಂತನೆ ಅಳವಡಿಸಿಕೊಂಡು ಸಾಕಷ್ಟು ರಾಷ್ಟ್ರಗಳು ಉತ್ತಮ ಮಾರ್ಗದಲ್ಲಿ ನಡೆಯುತ್ತಿವೆ. ಅದು ನಮಗೆ ಸ್ಪೂರ್ತಿ ಆಗಬೇಕೆಂದರು. ಬುದ್ಧನ ಜ್ಞಾನ ನಮ್ಮಲ್ಲಿ ಅಡಗಿರುವ ಕತ್ತಲೆಯನ್ನು ಓಡಿಸಲು ಇರುವ ಏಕೈಕ ಮಾರ್ಗ. ಈ ಮಾರ್ಗವನ್ನು ಕಂಡುಕೊಂಡರು ಅಂಬೇಡ್ಕರ್. ಇಂದು ನಾವು ಅಂಬೇಡ್ಕರ್ ಮೂಲಕ ಬುದ್ಧನನ್ನು ನೋಡುತ್ತಿದ್ದೇವೆ. ಬಾಬಾ ಸಾಹೇಬರ ಬರವಣಿಗೆ ಬದುಕು ಬುದ್ಧ ಚಿಂತನೆಯೇ ಆಗಿದೆ ಎಂದರು.
ಸಂಸದ ಶ್ರೀನಿವಾಸ ಪ್ರಸಾದ್ ಮಾತನಾಡಿದರು. ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ, ಡಾ. ಬಿ.ಆರ್. ಅಂಬೇಡ್ಕರ್ ಕೇಂದ್ರದ ಡಾ. ಎಸ್. ನರೇಂದ್ರಕುಮಾರ್, ಪ್ರೊ. ಸಿ. ಬಸವರಾಜು ಸೇರಿದಂತೆ ಇತರರು ಇದ್ದರು.
Key words: Buddha- thinking -solution – all problems-Mysore university-VC- Prof.G.Hemanth Kumar
ENGLISH SUMMARY….
Buddha’s thoughts are solution for all the problems: UoM VC
Mysuru, May 16, 2022 (www.justkannada.in): “Buddha’s thoughts can provide solutions to many problems that are haunting the world today,” observed Prof. G. Hemanth Kumar, Vice-Chancellor, University of Mysore.
He participated in a special lecture program on the topic, “Buddha’s Thoughts for the Contemporary World,” organized by the University of Mysore and Dr. B.R. Ambedkar Research and Extension Center, in association with the ‘Samaanate-Swabhimana-Swawalambane Pratishtana (Retd.),’ on the occasion of the 2566 Buddha Purnima.
“Buddha’s thoughts will teach the way to live in this society. Buddha is like a light to the world. There are two special reasons for celebrating the Buddha Purnima this year. The first is, the Buddha Research Center is being established at the University of Mysore and the second reason is organizing this program by the Srinivas Prasad’s Foundation. Buddha’s message of peace should be spread across the world,” he observed.
“Buddha’s thoughts provide solution for our many problems. But we have distanced ourselves from his thoughts. That is why we are facing many problems. There are several countries which have adopted Buddha’s thoughts and are moving in a good way. We should be inspired from them. Buddha’s thoughts are the only way to remove the darkness in us. Ambedkar adopted Buddha’s thoughts. As a result of that today we are seeing Buddha through Ambedkar. Ambedkar’s life of writings are nothing but Buddha’s thoughts,” he said.
MP Srinivas Prasad spoke on the occasion. Dr. Kalyanasiri Bhanteji of the Vishwamaitri Buddha Vihar, Dr.S. Narendrakumar, Prof. C. Basavaraju of the Dr. B.R. Ambedkar Center and others were present.
Keywords: University of Mysore/ Buddha’s thoughts/ solutions/ Prof. G. Hemanth Kumar/ Buddha Purnima