ಬೆಂಗಳೂರು,ಮಾ,5,2020(www.justkannada.in): ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನದಲ್ಲಿ ಕಡಿತವಾಗಿರುವುದನ್ನ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.
ಇಂದು 2020-21ನೇ ಸಾಲಿನ ಬಜೆಟ್ ಅನ್ನ ಸಿಎಂ ಬಿಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ. ಈ ನಡುವೆ ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದಲ್ಲಿ ಕಡಿಮೆಯಾಗಿದೆ. ರೂ.8883 ಕೋಟಿ ಅನುದಾನ ಕಡಿಮೆಯಾಗಿದೆ. ಹೀಗಾಗಿ ರಾಜಸ್ವ ಸಂಪನ್ಮೂಲ ಕಡಿತವಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದ್ದಾರೆ.
ಬಜೆಟ್ ಮಂಡಿಸಿತ್ತಿರುವ ಸಿಎಂ ಬಿಎಸ್ ವೈ, ಕಳೆದ ಬಾರಿಯ ಬಜೆಟ್ ಗಾತ್ರ 2 ಲಕ್ಷದ 34 ಸಾವಿರ ಕೊಟಿಯಾಗಿದ್ದು, ಈ ಬಾರಿಯ ಬಜೆಟ್ ಗಾತ್ರ 2 ಲಕ್ಷದ 37 ಸಾವಿರ ಕೋಟಿ ರೂಪಾಯಿಯಾಗಿದೆ. ಕಳೆದ ಸಾಲಿನಲ್ಲಿ ಬರಗಾಲದಿಂದ ಕೃಷಿ ಕ್ಷೇತ್ರದಲ್ಲಿ ಕುಸಿತವಾಗಿದ್ದು, ಈ ಸಾಲಿನಲ್ಲಿ ಚೇತರಿಕೆಯಾಗಿದೆ ಎಂದು ತಿಳಿಸಿದರು.
Key words: budget-2020-CM BS Yeddyurappa– cut -grants – Center – state-