ನವದೆಹಲಿ,ಫೆಬ್ರವರಿ,1,2021(www.justkannada.in): ಇನ್ಮುಂದೆ 75 ವರ್ಷ ಮೇಲ್ಪಟ್ಟಂತ ಹಿರಿಯ ನಾಗರೀಕರು ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಿ, ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.
ಈ ಕುರಿತು ಬಜೆಟ್ ನಲ್ಲಿ ಪ್ರಸ್ತಾಪಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪಿಂಚಣಿ ಮತ್ತು ಠೇವಣಿ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ತೆರಿಗೆಯಲ್ಲಿ ರಿಲೀಫ್ ನೀಡಲಾಗುತ್ತಿದೆ. ಪೆನ್ಷನ್ ಮತ್ತು ಠೇವಣಿ ಮೇಲೆ ಬಡ್ಡಿ ಪಡೆಯುತ್ತಿರುವವರಿಗೆ ಮಾತ್ರ ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಲಾಗಿದೆ. 75 ವರ್ಷ ಮೇಲ್ಪಟ್ಟಂತ ಹಿರಿಯ ನಾಗರೀಕರಿಗೆ ತೆರಿಗೆ ಕಟ್ಟೋದ್ರಿಂದ ವಿನಾಯ್ತಿ ನೀಡಲಾಗುತ್ತಿದೆ ಎಂದು ಘೋಷಿಸಿದ್ದಾರೆ. ಈ ಮೂಲಕ ಹಿರಿಯ ನಾಗರೀಕರಿಗೆ ಬಿಗ್ ರಿಲೀಫ್ ನೀಡಿದ್ದಾರೆ.
ದೇಶದಲ್ಲಿ 6.48 ಕೋಟಿ ಜನರು ಟ್ಯಾಕ್ಸ್ ಫೈಲ್ ಮಾಡಿದ್ದಾರೆ. 1.1 ಲಕ್ಷ ಜನರು ತೆರಿಗೆ ಕಟ್ಟುವ ವಿವಾದ ಬಗೆಹರಿಸಿಕೊಂಡಿದ್ದಾರೆ ಎಂದರು.
Key words: budget-Relief – tax-r senior citizens.