ಬೆಂಗಳೂರು,ಜುಲೈ,7,2023(www.justkannada.in): ವಿಧಾನಸಭೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಕುರಿತು ರಾಜ್ಯ ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಬಜೆಟ್ ಕುರಿತು ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್ ಸಿದ್ದರಾಮಯ್ಯನವರ ಬಜೆಟ್ ಸುಳ್ಳು ,ಮೋಸದಿಂದ ಕೂಡಿದೆ ಇದು ನಾಲಾಯಕ್ ಬಜೆಟ್. ಕಾಂಗ್ರೆಸ್ ಮತ್ತೆ ಸುಳ್ಳು ಹೇಳಿದೆ. 5 ಗ್ಯಾರಂಟಿಗಾಗಿ ಆದಾಯ ಹೆಚ್ಚು ತೋರಿಸಿದ್ದಾರೆ. ಗ್ಯಾರಂಟಿ ಜಾರಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ಮೇಕೆದಾಟಿಗೆ ಹಾಗೂ ಮಹದಾಯಿಗೆ ತಲಾ 10 ಸಾವಿರ ಕೋಟಿ ಮೀಸಲಿಡುತ್ತೇನೆ ಎಂದು ಹೇಳಿದ್ದರು, ಆದರೆ ಬಜೆಟ್ನ ಇಡೀ ಪುಸ್ತಕವನ್ನು ನೋಡಿದರೂ ಹಣ ಇಟ್ಟಿಲ್ಲ ಎಂದು ಕಿಡಿಕಾರಿದರು.
ಇನ್ನು ಬಜೆಟ್ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸುನಿಲ್ ಕುಮಾರ್, ‘ಈ ಸಾಲಿನ ಬಜೆಟ್ನ ಒಂದು ಲೈನ್ನಲ್ಲಿ ಹೇಳೋದಾದ್ರೆ, ಕೇಂದ್ರ ಸರ್ಕಾರ ಏನೂ ಕೊಡಲಿಲ್ಲ, ಹಿಂದಿನ ಸರ್ಕಾರ ಏನೂ ಮಾಡಲಿಲ್ಲ ಎನ್ನುವುದು ಅವರ ಸಾರಾಂಶ. ಬಜೆಟ್ ಅಂದ್ರೆ, ಆರ್ಥಿಕ ಮುನ್ನೋಟ. ಹಿಂದಿನ ಸರ್ಕಾರ ತೋರಿಸಿ ಕಾಗೆ ಹಾರಿಸೋ ಬಜೆಟ್ ಇದಾಗಿದೆ. ಚರ್ಚೆಯ ಸಂದರ್ಭದಲ್ಲಿ ಇದನ್ನು ವಿರೋಧಿಸುವ ಕೆಲಸ ಮಾಡ್ತೀವಿ. ವಿಶೇಷವಾಗಿ NEP ಕೈಬಿಡೋದಾಗಿ ಹೇಳಿದ್ದಾರೆ. ಈ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯನ್ನ ಅಲುಗಾಡಿಸುವ ಕೆಲಸ ಮಾಡಿದ್ದಾರೆ. ಭೌಗೋಳಿಕವಾಗಿ ಯಾವುದೇ ಭಾಗಕ್ಕೆ ನ್ಯಾಯ ಒದಗಿಸದ ಬಜೆಟ್ ಇದಾಗಿದೆ ಎಂದರು.
Key words: budget – Siddaramaiah – bad budget- former minister- R. Ashok