ಮೈಸೂರು,ಜ,31,2020(www.justkannada.in): ನಾಳೆ ಕೇಂದ್ರ ಬಜೆಟ್ ಹಿನ್ನೆಲೆ. ಈ ಬಾರಿಯ ಬಜೆಟ್ ಕೃಷಿ ಪೂರಕವಾಗಿ ಇರಬೇಕು ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಾಪುರ ನಾಗೇಂದ್ರ, ಕೃಷಿ ಕ್ಷೇತ್ರ ಸಾಕಷ್ಟು ಸಂಕಷ್ಟದಲ್ಲಿ ಇದೆ. ಪ್ರದಾನ ಮಂತ್ರಿಗಳು ಮನ್ ಕೀ ಬಾತ್ ನಲ್ಲಿ ಮಾತಲ್ಲಿ ಹೊಟ್ಟೆ ತುಂಬಿಸಿದ್ದಾರೆ. ಆದ್ರೆ ರೈತರ ಜೇಬು ತುಂಬಿಸಿಲ್ಲ. ಈ ಬಾರಿಯ ಬಜೆಟ್ ಕೃಷಿ ಪೂರಕವಾಗಿ ಇರಬೇಕು. ಕೃಷಿ ಕ್ಷೇತ್ರ ಬಿದ್ದರೆ ಎಲ್ಲಾ ಕ್ಷೇತ್ರ ಬಿದ್ದಂತೆ. ಕೃಷಿಗೆ ಒತ್ತು ಕೊಡದೆ ಹೋದರೆ ಉದ್ಯೋಗ ಸೃಷ್ಟಿ ಆಗೊಲ್ಲ, ದೇಶದ ಆರ್ಥಿಕತೆ ಅಭಿವೃದ್ಧಿ ಆಗಲ್ಲ. ಕೃಷಿಕೇತ್ರಕ್ಕೆ ಒತ್ತಾಯಸೆಯಾದ ಬಜೆಟ್ ನಿರೀಕ್ಷೆ ಮಾಡುತ್ತಿದ್ದೇವೆ. ಕೇವಲ ಕೃಷಿ ಅಷ್ಟೆ ಅಲ್ಲ ಕೃಷಿಕರನ್ನು ರಕ್ಷಣೆ ಮಾಡಬೇಕು. ರೈತ ಕುಟಂಬಕ್ಕೆ ಮಿನಿಮ್ ಇನ್ಕಮ್ ಗ್ಯಾರಂಟಿ ಯೋಜನೆ ಕೊಡಬೇಕು. ಪ್ರಾದೇಶಿಕ ವಾರು ಯಾವ ಬೆಳೆ ಬೆಳೆಯಬೇಕು ಎಂಬುದನ್ನ ಗುರುತಿಸಬೇಕು. ಕೃಷಿ ಉತ್ಪನ್ನಗಳ ವೆಚ್ಚ ಕಡಿಮೆ ಮಾಡುವ ಯೋಜನೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಕೃಷಿಕರು ಉಸಿರಾಡುವ ಸ್ಥಿತಿ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ತಲಕೆಳಕಾಗುತ್ತಿದೆ. ಏರೋಪ್ಲೇನ್ ಯಾಕೆ ಬೇಕು. ವಿಮಾನ ನಿಲ್ದಾಣ ಅಭಿವೃದ್ಧಿಗೆ ರೈತರ ಭೂಮಿ ಕಸಿಸುಕೊಳದಳಲಾಗುತ್ತದೆ. ಇದು ಆರ್ಥಿಕವಾಗಿ ನಷ್ಟವಾಗುತ್ತೆ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯುಂದ ಹಸಿರೂಕರಣ ನಾಶವಾಗುತ್ತೆ. ಎನ್ ಎಚ್ ಮಾಡೋದ್ರಿಂದ ಹೊಸ ವಿಮಾನ ತರೊದ್ರಿಂದ ಮೈಸೂರು ಅಭಿವೃದ್ಧಿ ಆಗೊದಿಲ್ಲ ಎಂದರು.
ನಿರ್ಮಲಾ ಸೀತಾರಾಮ್ ನಾಳೆ ಬಜೆಟ್ ಮಂಡಿಸಲಿದ್ದಾರೆ. ಎಲ್ಲಾ ಬಜೆಟ್ ಅವಲೋಕನ ಮಾಡಿದ್ರೆ ಕೆಂದ್ರ ಬಜೆಟ್ ಪೈಯ್ಲುರ್ ಆಗಿದೆ. ಜಿಡಿಪಿ ಹೆಚ್ಚಿಸಿಲ್ಲ, ಕೃಷಿಕರ, ಬಡವರ, ಬಂಡವಾಳ ಹೆಚ್ಚಿಸುಲ್ಲ, ಜನ ಸ್ನೇಹಿ ಬಂಡವಾಳ ಹೆಚ್ಚಳವಾಗಿಲ್ಲ. ಸಂಪತನ್ನ ಲೂಟಿ ಮಾಡುವ ಬಂಡವಾಳ ಹೆಚ್ಚಿಸಿದೆ. ಮದ್ಯಮ ವರ್ಗದ ಜನರು ನೆಮ್ಮದಿಯ ಜೀವನ ಮಾಡುವ ಜನಸ್ನೇಹಿ ಬಜೆಟ್ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ನಿರ್ಮಲಾ ಸೀತಾರಾಮನ ಕರ್ನಾಟಕದ ಪ್ರವಾಹ ಪೀಡಿತ ಜನರ ಸ್ಪಂದಿಸುವಂತ, ರೈತರ ಆತ್ಮಹತ್ಯೆ ತಡೆಗಟ್ಟುವಂತ ಯೋಜನೆಗಳನ್ನು ಬಜೆಟ್ ನಲ್ಲಿ ನೀಡಬೇಕು. ರಾಜ್ಯ ಸರ್ಕಾರ ಬಿಕ್ಷೆ ಬೇಡಿದಂಗೆ ಪರಿಹಾರ ಬೇಡಿದರು. ಅದರ ಬಗ್ಗೆ ಚಕಾರ ಎತ್ತಲ್ಲಿಲ್ಲ. ಜಿಎಸ್ ಟಿ ಬಂದ ಮೇಲೆ ಕರ್ನಾಟಕದಿಂದ 1ಲಕ್ಷದ 47 ಸಾವಿರ ಕೋಟಿ ನೇರವ ಹಣ ಹೊಗಿದೆ. ಆ ಹಣ ವಾಪಸ್ ಕೊಡುತ್ತಿಲ್ಲ. ಹಾಗಾಗಿ ಕೃಷಿಕರಿಗೆ ಪೂರಕ ಬಜೆಟ್ ಕೊಡಬೇಕು ಎಂದರು.
Key words: budget – supplement -agriculture -Farmer leader -Badalpur Nagendra