ಈ ಬಾರಿಯ ಬಜೆಟ್ ನಲ್ಲಿ ಆತ್ಮನಿರ್ಭರತೆಗೆ ಒತ್ತು: ಶೀಘ್ರದಲ್ಲಿ ಎಲ್ ಐಸಿಯಿಂದ ಬಂಡವಾಳ ಹಿಂತೆಗೆತ- ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

ನವದೆಹಲಿ,ಫೆಬ್ರವರಿ,1,2022(www.justkannada.in): ಈ ಬಾರಿಯ ಬಜೆಟ್ ನಲ್ಲಿ ಆತ್ಮನಿರ್ಭರತೆಗೆ ಒತ್ತು ನೀಡಲಾಗುತ್ತಿದೆ. ಆತ್ಮನಿರ್ಬರ ಭಾರತದಡಿ 16 ಲಕ್ಷ ಉದ್ಯೋಗ ಸೃಷ್ಟಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ತಿಳಿಸಿದರು.

ಇಂದು ಲೋಕಸಭೆಯಲ್ಲಿ ಕೇಂದ್ರ ವಿತ್ತಸಚಿವೆ 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ.  ಕಾಗದ ರಹಿತ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್, ವಿಶ್ವದಲ್ಲಿಯೇ ಭಾರತದ ಆರ್ಥಿಕತೆ ಅತೀ ವೇಗವಾಗಿ ಬೆಳೆಯುತ್ತಿದೆ. ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೊರೋನಾದಿಂದ ಆರೋಗ್ಯ ಮತ್ತು ಆರ್ಥಿಕ ತೊಂದರೆ 2014ರಿಂದ ಜನರ ಕಲ್ಯಾಣವೇ ನಮ್ಮ ಧ್ಯೇಯ. ನಾಗರಿಕರನ್ನು ಸಶಕ್ತಗೊಳಿಸುವ ಆದ್ಯತೆ ನಮ್ಮ ಸರ್ಕಾರದ್ದಾಗಿದೆ ಎಂದರು.

ನಾವು ಆಜಾದಿ ಅಮೃತ ಮಹೋತ್ಸವ ಆಚರಿಸಿದ್ದೇವೆ. ಕೋವಿಡ್ ಮಧ್ಯೆಯೇ ಭಾರತ ಆರ್ಥಿಕ ಚೇತರಿಕೆ ಕಾಣುತ್ತಿದೆ. ವಿಶ್ವದಲ್ಲಿಯೇ ಭಾರತದ ಆರ್ಥಿಕತೆ ಅತೀ ವೇಗವಾಗಿ ಬೆಳೆಯುತ್ತಿದೆ. ಆರೋಗ್ಯ, ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಮುಂದಿನ 25 ವರ್ಷಗಳಿಗೆ 6 ಆಧಾರ ಸ್ತಂಭಗಳನ್ನು ಗುರುತಿಸಲಾಗಿದೆ. ಇದು ದೂರದೃಷ್ಟಿಯ ಬಜೆಟ್ ಆಗಿದೆ. ಆತ್ಮನಿರ್ಬರ ಭಾರತದಡಿ 16 ಲಕ್ಷ ಉದ್ಯೋಗ ಸೃಷ್ಟಿ. ಶೀಘ್ರದಲ್ಲಿಯೇ ಎಲ್ ಐಸಿಯಿಂದ ಬಂಡವಾಳ ಹಿಂತೆಗೆತ, ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ . ಈ ಬಾರಿಯ ಬಜೆಟ್ ನಲ್ಲಿ ಆತ್ಮನರ್ಭರತೆಗೆ ಒತ್ತು. ದೇಶದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ತಿಳಿಸಿದರು.

Key words: budget- Union -Finance Minister- Nirmala Sitharaman.