ಮನೆ ಕಟ್ಟಲು 5 ಲಕ್ಷ ಸಾಲದು:  10 ಲಕ್ಷ ಕೊಡಬೇಕು-ಹುಣಸೂರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ..

ಮೈಸೂರು,ಆ,30,2019(www.justkannada.in): ಮೈಸೂರಿನ ಹುಣಸೂರು ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ  ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೈಸೂರಿನ ಹುಣಸೂರು ತಾಲ್ಲೂಕಿನ  ಹನಗೋಡು, ಕೋಣೆನಹಳ್ಳಿ, ಅಬ್ಬೂರು ಬೀಳೆನಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಿದ್ದರಾಮಯ್ಯ  ಪರಿಶೀಲಿಸಿದರು. ಹಾಗೆಯೇ ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಕೊಚ್ಚಿಹೋಗಿರುವ ನಾಲೆ ವೀಕ್ಷಣೆ ಮಾಡಿದರು. ಇದೇ ವೇಳೆ ಗ್ರಾಮದಲ್ಲಿ ಆಸ್ತಿಪಾಸ್ತಿ ನಷ್ಟ ಹಾಗೂ ಪ್ರವಾಹದ ನಂತರದ ಪರಿಸ್ಥಿರಿ ಅವಲೋಕನ ಮಾಡಿದ ಅವರು ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು..

ಮೈಸೂರಿನ ಹುಣಸೂರು ಭಾಗದ ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ  ಸಿದ್ದರಾಮಯ್ಯ,  ಮನೆ ಕಟ್ಟಲು 5 ಲಕ್ಷ ಸಾಲದು. 10 ಲಕ್ಷ ಕೊಡಬೇಕು. ಈಗಾಗಲೇ 10 ಸಾವಿರ ಕೊಡುವುದಾಗಿ ಸಿಎಂ‌ ತಿಳಿಸಿದ್ದಾರೆ. ಆದ್ರೆ ಈವರೆಗು 10 ಸಾವಿರ ಎಲ್ಲರಿಗೂ ತಲುಪಿಲ್ಲ‌. ಈ ಪರಿಹಾರ ಸಾಲುವುದಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ನಾವು ಮಾಹಿತಿಯನ್ನು ಸಿಎಂಗೆ ತಿಳಿಸುತ್ತೇನೆ. ಎನ್.ಡಿ.ಆರ್.ಎಫ್ ನರ್ಮ್ ಪ್ರಕಾರ ಬೆಳೆ ಪರಿಹಾರ ನೀಡಿದ್ರೆ ಏನು ಸಿಗುವುದಿಲ್ಲ. ಇದನ್ನ ಸಡಿಲಗೊಳಿಸಬೇಕು ಎಂದರು.

ಪ್ರವಾಹ ಬಂದು ಮೂರು ವಾರಗಳಾಗಿದೆ. ಆದ್ರೆ ಪ್ರಧಾನಿ‌ ಭೇಟಿ ನೀಡಿಲ್ಲ, ಪರಿಹಾರವನ್ನು ನೀಡಿಲ್ಲ. ರಾಜ್ಯದಲ್ಲಿ ಆಗಿರುವ ಹಾನಿಯನ್ನ ರಾಷ್ಟ್ರೀಯ ವಿಪ್ಪತ್ತು ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯಕ್ಕೆ ಪ್ರಧಾನಿ ಭೇಟಿ ವೇಳೆ ನೆರೆ ಪರಿಹಾರ ಬಗ್ಗೆ ಮನವರಿಕೆ ಮಾಡ್ತೇನೆ ಎಂದಿದ್ದ ಬಿಎಸ್ ವೈಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಮುಂದಿನ ತಿಂಗಳು 7 ನೇ ತಾರೀಖು ಮೋದಿ ಬಂದ್ರೆ ಏನು ಪ್ರಯೋಜನ. ಅಂದ್ರೆ ಇಲ್ಲಿವರೆಗೂ ನೆರೆ ಪರಿಹಾರದ ಬಗ್ಗೆ ಮನವರಿಕೆ ಮಾಡಿಲ್ಲ ಎಂದು ಅರ್ಥ ಆಯ್ತು.25  ಎಂಪಿಗಳು ರಾಜ್ಯದಿಂದ ಆಯ್ಕೆಯಾಗಿದ್ದಾರೆ.ಅವರೇನು ಮಾಡ್ತಾ ಇದಾರೆ. ಈ ಹಿಂದೆ 2009ರಲ್ಲಿ  ಪ್ರವಾಹ ಬಂದಿತ್ತು ಆಗ ಮನಮೋಹನ್ ಸಿಂಗ್ ತಕ್ಷಣ ಸ್ಪಂದಿಸಿದ್ರು. ಈಗ ಕೇಂದ್ರದಲ್ಲು ಇವರದ್ದೆ, ರಾಜ್ಯದಲ್ಲು ಇವರದ್ದೆ ಸರ್ಕಾರವಿದೆ. ಏನು ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಮಹದೇವಪ್ಪ ಏನ್ ಹೇಳ್ತಾರೆ ಎಂದು‌ ನೋಡೋಣ.

ಹುಣಸೂರು ಉಪಚುನಾವಣೆ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಹೆಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಉಸ್ತುವಾರಿ ಕಮಿಟಿ ಮಾಡಿದ್ದೇವೆ. ಮಹದೇವಪ್ಪ ಏನ್ ಹೇಳ್ತಾರೆ ಎಂದು‌ ನೋಡೋಣ. ಜನರೆಲ್ಲ ಮಂಜುನಾಥ್ ಗೆ ಟಿಕೆಟ್ ಕೊಡಿ ಎಂದು ಹೇಳುತ್ತಿದ್ದಾರೆ. ಜೆ.ಡಿ.ಎಸ್ ಕಾಂಗ್ರೆಸ್ ಮೈತ್ರಿ ಮುಂದುವರಿಕೆ ವಿಚಾರ ಹೈಕಮಾಂಡ್ ತೀರ್ಮಾನ‌ ಮಾಡುತ್ತೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

Key words: building –house-Rs 10 lakhs-former CM -Siddaramaiah -affected areas -Hunasur.