ದಾವಣಗೆರೆ, ಸೆಪ್ಟೆಂಬರ್, 06, 2020(www.justkannada.in) : ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರಿಗೆ ರಾಮಾಯಣ ಬರೆದ ವಾಲ್ಮೀಕಿಯ ಬಗ್ಗೆಯೂ ಗೌರವವಿರಬೇಕು. ರಾಮಮಂದಿರದ ಬಳಿ ವಾಲ್ಮೀಕಿ ದೇವಸ್ಥಾನವನ್ನು ನಿರ್ಮಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆದ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸಂವಿಧಾನಾತ್ಮಕ ಸಿಗಬೇಕಾದ ಶೇ 7.5%ರಷ್ಟು ಮೀಸಲಾತಿಯ ವಿಷಯ ಕುರಿತ ರಾಜ್ಯ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು.
ದೆಶದಲ್ಲಿ ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು. ರಾಮಾಯಣ ಬರೆದ ವಾಲ್ಮೀಕಿಯನ್ನು ಗೌರವಿಸಬೇಕು. ಹೀಗಾಗಿ ರಾಮಮಂದಿರದ ಬಳಿ ವಾಲ್ಮೀಕಿ ದೇವಸ್ಥಾನವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
Key words :Build-Valmiki-Temple-near- Ram Mandir-Sri Prasananda Swamiji-Maharishi-Valmiki-Gurupith