ಇಂದಿನಿಂದ ಕರ್ನಾಟಕ- ಕೇರಳ ನಡುವೆ ಬಸ್ ಸಂಚಾರ: ನೆಗೆಟಿವ್ ರಿಪೋರ್ಟ್ ಕಡ್ಡಾಯ.

ಬೆಂಗಳೂರು,ಜುಲೈ,12,2021(www.justkannada.in): ಇಂದಿನಿಂದ ಕರ್ನಾಟಕ- ಕೇರಳ ನಡುವೆ ಬಸ್ ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.jk

ಕೊರೋನಾ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಚಾರ ಸೇರಿ ಎಲ್ಲಾ ವ್ಯಾಪಾರ, ವ್ಯವಹಾರವೂ ಬಂದ್ ಆಗಿತ್ತು. ಇದೀಗ ಕೊರೋನಾ ಕಡಿಮೆಯಾಗಿದ್ದು ರಾಜ್ಯದಲ್ಲಿ ಅನ್ ಲಾಕ್ ಮಾಡಲಾಗಿದೆ.

ಹಾಗೆಯೇ ರಾಜ್ಯದಲ್ಲಿ ಸಾರಿಗೆ ಸಂಚಾರವೂ ಆರಂಭವಾಗಿದ್ದು ಇಂದಿನಿಂದ ಕರ್ನಾಟಕ ಮತ್ತು ಕೇರಳ ನಡುವೆ ಬಸ್ ಸಂಚಾರ ಆರಂಭವಾಗಿದೆ. ಇನ್ನು ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂಬ ರೂಲ್ಸ್ ಜಾರಿ ಮಾಡಲಾಗಿದೆ. ಹಾಗೆಯೇ ನಿರ್ವಾಹಕರು ಕಡ್ಡಾಯವಾಗಿ ಕೋವಿಡ್ ರಿಪೋರ್ಟ್ ಚೆಕ್ ಮಾಡಬೇಕು ಎಂದು ಸೂಚಿಸಲಾಗಿದೆ.

ENGLISH SUMMARY….

Bus services between Karnataka-Kerala resume from today: Negative report compulsory
Bengaluru, July 12, 2021 (www.justkannada.in): The bus services between Karnataka-Kerala have resumed from today. However, travelers have to produce COVID negative reports compulsorily.
Lockdown was announced following the increase in the number of Coronavirus cases. Hence, transportation to Kerala was also stopped. As the cases of COVID-19 Pandemic is reducing now bus services have resumed. However, those who travel should compulsorily produce COVID negative reports. Bus conductors are asked to seek the negative report compulsorily.
Keywords: KSRTC/ Karnataka-Kerala/ bus services resume/ COVID-19/ negative report/ compulsory

Key words: Bus -service – Karnataka to Kerala  Negative- report